ವಿಟ್ಲ: ವಿಟ್ಲದ ಪರಿಸರದಲ್ಲಿ ಒಡಿಯೂರು ಶ್ರೀ ಚಾರಿಟೇಬಲ್ ಟ್ರಸ್ಟ್, ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಹಾಗೂ ಪರಮಪೂಜ್ಯ ಒಡಿಯೂರು ಶ್ರೀಗಳ ಜನ್ಮದಿನೋತ್ಸವ ಸಮಿತಿ ಒಡಿಯೂರು ಗುರುದೇವದತ್ತ ಸಂಸ್ತಾನಮ್ ಇದರ ಆಶ್ರಯದಲ್ಲಿ ಗ್ರಾಮ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

ವಿಠಲ ಪದವಿ ಪೂರ್ವ ಕಾಲೇಜಿನ ಎನ್ ಎಸ್ ಎಸ್ ಘಟಕ, ರೋಟರಿ ಕ್ಲಬ್ ವಿಟ್ಲ, ವಿಟ್ಲ ಪಟ್ಟಣ ಪಂಚಾಯತ್, ಶ್ರೀ ಉಲ್ಲಾಲ್ತಿ ಪಂಚಲಿಂಗೇಶ್ವರ ಭಜನಾ ಪರಿಷತ್, ವಿಟ್ಲ ಕಸಬಾ ಘಟಕ ಸಮಿತಿ ಮತ್ತು ವಿಟ್ಲ ಪಡ್ನೂರು ಘಟಸಮಿತಿ ವತಿಯಿಂದ ಈ ಕಾರ್ಯಕ್ರಮ ನಡೆಯಿತು.
