ಬಂಟ್ವಾಳ: ಪೋಲೀಸ್ ಇಲಾಖೆಯಲ್ಲಿ 37 ವರ್ಷ ಗಳ ಕಾಲ ಸೇವೆ ಸಲ್ಲಿಸಿ ಇದೀಗ ವಯೋನಿವ್ರತ್ತಿ ಹೊಂದಿದ ಪುತ್ತೂರು ಅರಣ್ಯ ಸಂಚಾರದಳದ ಪೋಲೀಸ್ ಉಪನಿರೀಕ್ಷಕ ಆನಂದ ಪೂಜಾರಿ ಅವರ ಬೀಳ್ಕೊಡುಗೆ ಸಮಾರಂಭವು ಪ್ರವಾಸಿ ಬಂಗಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಡಿಕೇರಿ ಸಿ.ಐ.ಡಿ.ಅರಣ್ಯ ಘಟಕದ ಪ್ರಭಾರ ಪೋಲೀಸ್ ಅಧೀಕ್ಷರಾದ ಎಸ್.ಎಸ್.ಕಾಶೀ ರವರ ಅದ್ಯಕ್ಷತೆ ವಹಿಸಿದರು.

ಮಂಗಳೂರು, ಪುತ್ತೂರು, ಮೈಸೂರು, ಕೊಳ್ಳೆಗಾಲ, ಚಾಮರಾಜನಗರ, ವಿರಾಜಪೇಟೆ, ಮಡಿಕೇರಿ, ಸೋಮವಾರ ಮತ್ತು ಹಾಸನ ಒಟ್ಟು ಒಂಬತ್ತು ಘಟಕ ದ ವತಿಯಿಂದ ಆನಂದ ಅವರಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಂಗಳೂರು ಘಟಕದ ಪಿ.ಎಸ್.ಐ.ಸುಧಾಕರ, ಮೈಸೂರು ಮತ್ತು ಸಕಲೇಶಪುರ ಘಟಕದ ಪಿ.ಎಸ್.ಐ.ಹರೀಶ್ ಕುಮಾರ್, ಕೊಳ್ಳಾಗಾಲ ಘಟಕದ ಪಿ.ಎಸ್.ಐ.ಚಿಕ್ಕರಾಜ ಶೆಟ್ಟಿ, ಸೋಮವಾರ ಪೇಟೆ ಘಟಕದ ಪಿ.ಎಸ್.ಐ.ಚೆನ್ನಕೇಶವ, ವಿರಾಜಪೇಟೆ ಘಟಕದ ಪ್ರಭಾರ ಪಿ.ಎಸ್.ಐ ಸೋಮಣ್ಣ, ಮಡಿಕೇರಿ ಘಟಕದ ಪ್ರಭಾರ ಪಿ.ಎಸ್. ಐ ಸುಭಾಷ್ ಹಾಗೂ ಸಿಬ್ಬಂದಿ ಗಳು ಉಪಸ್ಥಿತರಿದ್ದರು.
