ಬಂಟ್ವಾಳ: ಬಂಟ್ವಾಳ ರೋಟರಿ ಕ್ಲಬ್ ವತಿಯಿಂದ ಕ್ಲಬ್‍ನ ಮಾಸಿಕ ಸಭೆಯಲ್ಲಿ ಮೊದಲ ಮಹಿಳಾ ರಿಕ್ಷಾ ಚಾಲಕಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾದ ಮಣಿನಾಲ್ಕೂರು ಗ್ರಾಮದ ಮಾರ್ದಡ್ಕ ನಿವಾಸಿ ಪೂರ್ಣಿಮ ಅವರನ್ನು ಭಾನುವಾರ ಗೌರವಿಸಲಾಯಿತು.

rikshaw driver poornima-felicitation
ರಿಕ್ಷಾ ಚಾಲನೆಯನ್ನು ವೃತ್ತಿಯಾಗಿಸಿಕೊಂಡು ಪುರುಷರಿಗೆ ಸಮಾನರಾಗಿ ದುಡಿಯುತ್ತಿರುವ ಅವರ ಸಾಧನೆ ಹಾಗೂ ಧೈರ್ಯ ಮಹಿಳೆಯರಿಗೆ ಮಾದರಿಯಾಗಿರುವುದನ್ನು ಪರಿಗಣಿಸಿ ಪೂರ್ಣಿಮ ದಂಪತಿಯನ್ನು ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ ಆಚಾರ್ಯ ಶಾಲು, ಹಾರ ಸ್ಮರಣಿಕೆ ನೀಡಿ ಅಭಿನಂದಿಸಿದರು.
ಈ ಸಂದರ್ಭ ಎನೋಪಾಯ ಆಸ್ಪತ್ರೆಯ ವೈದ್ಯ ಡಾ. ಸಂತೋಷ್ ಪೈ ಬಿ.ಎಚ್., ರೋಟರಿಕ್ಲಬ್ ಸುವರ್ಣ ವರ್ಷಾಚರಣೆ ಸಮಿತಿ ಸಂಚಾಲಕ ಡಾ. ರಮೇಶಾನಂದ ಸೋಮಯಾಜಿ, ವಿದ್ಯಾ, ಅಶ್ವನಿ ರೈ, ಸ್ಮಿತಾ ಸಲ್ದಾನ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *