ಬಂಟ್ವಾಳ: ಸಜೀಪಮುನ್ನೂರು ಗ್ರಾಮದ ಕರಾಂದಾಡಿಯಲ್ಲಿದ್ದ ನಾಲ್ಕೈತ್ತಾಯ, ಜುಮಾದಿ ಬಂಟ, ಮಹಿಷಂದಾಯ ಧರ್ಮ ದೈವಗಳು ಸುಮಾರು 600 ವರ್ಷಗಳ ಹಿಂದೆ ನಂದಾವರ ಅರಸರ ಆಳ್ವಿಕೆಯಲ್ಲಿತ್ತು. ಈಗ ದೈವಸ್ಥಾನದ ಚಾವಡಿ ಕಾಲಂತರದಲ್ಲಿ ಜೀರ್ಣಾವಸ್ಥೆಗೆ ತಲುಪಿದೆ. ಅಷ್ಟಮಂಗಳ ಪ್ರಶ್ನೆಯಲ್ಲಿ ದೈವಸ್ಥಾನದ ಜೀಣೋದ್ದಾರ ಕಾರ್ಯವನ್ನು ಮಾಡಬೇಕೆಂದು ತಿಳಿದುಬಂದಿದೆ.

jeernoddara (1)
ಕರಂದಾಡಿ ಧರ್ಮಚಾವಡಿಗೆ ಸೇರಿದ ಪೂರ್ವದಲ್ಲಿ ಐದು ಗುತ್ತು ಬಾರಿಕೆಗಳು ಹಾಗೂ ಮೂರು ಪ್ರಧಾನ ನಾಗಕೆರೆಗಳು ಇದೆ. ಇಲ್ಲಿ ವೈಭವದಿಂದ ನೇಮೋತ್ಸವಗಳು ನಡೆಯುವ ಪ್ರತೀತಿ ಇತ್ತು. ಆದರೆ ಕಾಲಕ್ರಮೇಣ ಅವೆಲ್ಲವೂ ನಿಂತು ಹೋಗಿದ್ದು, ಕರಂದಾಡಿ ಧರ್ಮಚಾವಡಿಗೆ ಹಲವಾರು ತೊಂದರೆ ಕಂಡು ಬಂದವು. ಈ ಕಾರಣಕ್ಕಾಗಿ ಪ್ರಶ್ನೆ ಮಾಡಿದಾಗ ದೈವಸ್ಥಾನದ ಜೀಣೋದ್ದಾರ ಮತ್ತು ಪುನರ್ ಪ್ರತಿಷ್ಠಾಪನೆ ಮಾಡಬೇಕೆಂದು ಕಂಡು ಬಂದ ಹಿನ್ನಲೆಯಲ್ಲಿ ದೈವಸ್ಥಾನದ ಜೀಣೋದ್ದಾರ ಕಾರ್ಯ ನಡೆಸಲಾಗಿದೆ.

jeernoddara (2)
ಪ್ರಶ್ನೆಯ ಪ್ರಕಾರ ದೈವಸ್ಥಾನದ ಅಂಗಣದಲ್ಲಿ ಭಾನುವಾರ ಗ್ರಾಮಸ್ಥರ ಸಭೆ ನಡೆಸಿದರು. ದೈವಸ್ಥಾನದ ಪುನರ್ ಪ್ರತಿಷ್ಠಾಪನೆ ಕುರಿತ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಾಯಿತು. ಈ ಸಭೆಯ ವೇಳೆ ಜೀಣೋದ್ಧಾರ ಸಮಿತಿಯ ರಚನೆಯನ್ನು ಮಾಡಲಾಯಿತು. ಅಧ್ಯಕ್ಷರಾಗಿ ಸಜೀಪಮುನ್ನೂರು ಗ್ರಾ.ಪಂ.ಮಾಜಿ ಅಧ್ಯಕ್ಷ ಯೂಸುಫ್ ಕರಂದಾಡಿ ಅವರನ್ನು ಅವಿರೋಧದಿಂದ ಆಯ್ಕೆ ಮಾಡಲಾಯಿತು. ಗೌರವಾದ್ಯಕ್ಷರಾಗಿ ಋತ್ವಿಕ್ ಆಳ್ವ ಅಮ್ಟಾಡಿ, ಉಪಾಧ್ಯಕ್ಷರಾಗಿ ಸುಂದರ ಪೂಜಾರಿ, ಪ್ರಧಾನ ಕಾರ್ಯದರ್ಶಿಯಾಗಿ ನಿತ್ಯಾನಂದ ವಿದ್ಯಾನಗರ, ಜೊತೆಕಾರ್ಯದರ್ಶಿಯಾಗಿ ವಿರೇಂದ್ರ ಕೊಂಕಂಡ, ಕೋಶಾಧಿಕಾರಿಯಾಗಿ ಮಧುಸೂಧನ್ ಗುಂಡಿಕೆರೆ, ಸಲಹೆಗಾರರಾಗಿ ದಿವಾಕರ ವಿದ್ಯಾನಗರ ಆಯ್ಕೆಯಾದರು.

ಈ ಸಂದರ್ಭದಲ್ಲಿ ಸೂರ್ಯನಾರಾಯಣ ತಂತ್ರಿ, ಸುಂದರ ಪೂಜಾರಿ, ಯೂಸುಫ್ ಕರಂದಾಡಿ, ಧೀರಜ್ ಶೆಟ್ಟಿ ಪರಾರಿ, ವಿಶ್ವನಾಥ ಪೂಜಾರಿ, ಎಸ್.ರವಿಚಂದ್ರ ಶಾಂತಿ, ಸದಾನಂದ ಶಾಂತಿ, ನಿತ್ಯಾನಂದ, ವಿರೇಂದ್ರ ಕೋಕಂಡ ಹರಿಶ್ಚಂದ್ರ, ಲಕ್ಷ್ಮಣ, ದಿವಾಕರ, ಲಕ್ಷ್ಮಣ ಸಾಲ್ಯಾನ್ ಮರಕಡ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *