ಬಂಟ್ವಾಳ: ಬಂಟ್ವಾಳ ತಾಲೂಕಿನ ಕೇಂದ್ರ ಸ್ಥಾನ ಎಂದು ಗುರುತಿಸಿಕೊಂಡಿರುವ ರಾಷ್ಟ್ರೀಯ ಹೆದ್ದಾರಿ ಬಳಿ ಕಳೆದ ಒಂದು ವರ್ಷದ ಹಿಂದೆಯಷ್ಟೇ ಕಾಂಕ್ರೀಟು ಕಾಮಗಾರಿಯನ್ನು ಪೂರ್ಣಗೊಳಿಸಿತ್ತು. ಆದರೆ ಅದು ಈಗ ಎದ್ದು ಹೋಗಿದೆ. ಹಲವೆಡೆ ಚರಂಡಿಗೆ ಅಳವಡಿಸಿದ ಕಾಂಕ್ರೀಟು ಮುಚ್ಚಳ ಒಡೆದು ಬಾಯ್ತೆರೆದು ಅಪಾಯ ಆಹ್ವಾನಿಸುತ್ತಿದ್ದರೆ, ಇನ್ನೊಂದೆಡೆ ಕಳಪೆ ರಸ್ತೆ.

Service Road
ಪ್ರತಿ ವರ್ಷಕ್ಕಿಂತ ಈ ವರ್ಷ ಮಳೆ ಹೆಚ್ಚಾಗಿದ್ದು, ಇದರಿಂದಾಗಿ ರಸ್ತೆಯುದ್ದಕ್ಕೂ ಕೆಸರು ನೀರು ತುಂಬಿಕೊಂಡಿದೆ. ಇದರಿಂದ ಜನಸಂಚಾರ ಹಾಗೂ ವಾಹನಸಂಚಾರಕ್ಕೆ ಕಷ್ಟವಾಗುತ್ತಿದೆ. ಅಲ್ಲಲ್ಲಿ ಬಾಯ್ತೆರೆದ ಚರಂಡಿ ಹೊಂಡಕ್ಕೆ ಪಾದಚಾರಿಗಳು ಮತ್ತು ದ್ವಿಚಕ್ರ ಮತ್ತಿತರ ವಾಹನ ಸವಾರರು ಉರಳಿ ಬೀಳುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಈ ಬಗ್ಗೆ ಸಾಕಷ್ಟು ಬಾರಿ ಇಲ್ಲಿನ ವಿವಿಧ ಹೋರಾಟ ಸಮಿತಿ ಸಹಿತ ರಿಕ್ಷಾ ಮತ್ತಿತರ ಚಾಲಕ -ಮಾಲೀಕರು ಪ್ರತಿಭಟನೆ ನಡೆದಿದೆ. ಅಷ್ಟೇ ಅಲ್ಲದೇ ಶ್ರಮದಾನ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಲಾಗುತ್ತಿದೆ.

By suddi9

Leave a Reply

Your email address will not be published. Required fields are marked *