ಬಂಟ್ವಾಳ: ಶಾಸಕರಾದ ರಾಜೇಶ್ ನಾೈಕ್ ಉಳಿಪ್ಪಾಡಿಯವರು ಜು.29 ಭಾನುವಾರದಂದು ಬೇರೆ ಬೇರೆ ಕಾರ್ಯಕ್ರಮಗಳಿಗೆ ಭೇಟಿ ನೀಡಲಿದ್ದಾರೆ.
ನಾಳಿನ ಮೊದಲ ಕಾರ್ಯಕ್ರಮ ಬೆಳಗ್ಗೆ 10.30ಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಗ್ಗ ವಲಯ ಒಕ್ಕೂಟದ ಪದಗ್ರಹಣ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನಂತರ 11.30ಕ್ಕೆ ಪಾಣೇಮಂಗಳೂರಿನ ಸುಮಂಗಲಾ ಕಲ್ಯಾ ಮಂಟಪದಲ್ಲಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

rajesh naik
ಮಧ್ಯಾಹ್ನ 12 ಗಂಟೆಗೆ ತುಳು ಸಂಪ್ರಾದಾಯಿಕ ಆಚರಣೆಯನ್ನು ಪಾಲ್ತಾಜೆಯ ಸಾಲೆತ್ತೂರು ಬಂಟರ ಸಂಘ ಸಿರಿ ವಿದ್ಯಾಲಯದಲ್ಲಿ ಆಟಿಡೊಂಜಿ ಕೂಟ ಕಾರ್ಯಕ್ರಮ ನಡೆಯುತ್ತದೆ. ಅಲ್ಲಿಂಧ 12.30ಕ್ಕೆ ವೀರಕುಂಭದಲ್ಲಿ ಕೆಸರ್‍ಡೊಂಜಿ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ದಿನದ ಕೊನೆಯ ಕಾರ್ಯಕ್ರಮ ವಾಮದಪದವಿನ ಬಸ್ತಿಕೋಡಿಯಲ್ಲಿ ಪರಿಶಿಷ್ಟರ ಕಾಲನಿಗೆ ಭೇಟಿ ನೀಡಲಿದ್ದಾರೆ.

By Suddi9

Leave a Reply

Your email address will not be published. Required fields are marked *