ಬಂಟ್ವಾಳ ತಾಲ್ಲೂಕಿನ ಕುರಿಯಾಳ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ‘ಶಾಲೆಗೊಂದು ವನ ಮಗುವಿಗೊಂದು ಗಿಡ ‘ ಕಾರ್ಯಕ್ರಮ ಬುಧವಾರ ನಡೆಯಿತು.
ಶಾಲಾ ಸಂಚಾಲಕ ಪೀಟರ್ ಅರಾನ್ಹಾ, ಪ್ರಗತಿಪರ ಕೃಷಿಕ ರಘುನಾಥ ಎಸ್. ಪಯ್ಯಡೆ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಘವ ಪೂಜಾರಿ, ಕೃಷಿ ಮೇಲ್ವಿಚಾರಕ ಮುರಳೀಧರ ಎ., ವಲಯ ಮೇಲ್ವಿಚಾರಕ ರಮೇಶ್, ವಲಯಾಧ್ಯಕ್ಷ ಶೇಖರ್, ಸೇವಾಪ್ರತಿನಿಧಿ ಅಮಿತಾ ಇದ್ದರು.
