ಬಂಟ್ವಾಳ:ತಾಲ್ಲೂಕಿನಲ್ಲಿ ಮನೆ ಕಟ್ಟುವುದಕ್ಕಾಗಿ ಜನಸಾಮಾನ್ಯರು ಖರೀದಿಸಿದ ಜಮೀನು ಭೂ ಪರಿವತನೆಗೊಳಿಸಲು ರಾಜ್ಯ ಸರ್ಕಾರವು 15ಕ್ಕೂ ಮಿಕ್ಕಿ ಷರತ್ತುಗಳನ್ನು ನೀಡುವ ಮೂಲಕ ಕಳೆದ ಐದಾರು ತಿಂಗಳಿನಿಂದ ಈ ಪ್ರಕ್ರಿಯೆ ಸ್ಥಗಿತಗೊಂಡಿದೆ ಎಂದು ಬಿಜೆಪಿ ಪರಿಶಿಷ್ಟ ಮೋರ್ಚಾ  ಜಿಲ್ಲಾಧ್ಯಕ್ಷ ದಿನೇಶ ಅಮ್ಟೂರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ತಾಲ್ಲೂಕಿನ ಬಿ.ಸಿ.ರೋಡಿನಲ್ಲಿ ತಹಶೀಲ್ದಾರ್ ಪುರಂದರ ಹೆಗ್ಡೆ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಪರಿಶಿಷ್ಟ ಜಾತಿ ಮತ್ತು ಪಂಗಡ ಕುಂದು ಕೊರತೆ ಸಭೆಯಲ್ಲಿ ಅವರು ಈ ಬಗ್ಗೆ ಮಾತನಾಡಿದರು.25btl-Sabhe
ಈ ಹಿಂದೆ ರೂ 5ಸಾವಿರ ವೆಚ್ಚದಲ್ಲಿ ಐದು ಸೆಂಟ್ಸ್ ಜಮೀನು ಭೂಪರಿವರ್ತನೆಗೊಳಿಸಲು ಸಾಧ್ಯವಾಗುತ್ತಿದ್ದು, ಇದೀಗ ಸರ್ಕಾರ ವಿಧಿಸಿರುವ ಹೊಸ ಷರತ್ತಿನ ಪ್ರಕಾರ ರೂ 1 ಲಕ್ಷಕ್ಕೂ ಮಿಕ್ಕಿ ಖರ್ಚಾ ಗುವ ಸಾಧ್ಯತೆಯಿದೆ. ಮಾತ್ರವಲ್ಲದೆ ಜನಸಾಮಾನ್ಯರಿಗೆ ಇಂತಹ ತೊಡಕುಗಳ ಬಗ್ಗೆ ಜನ ಸಾಮಾನ್ಯರಿಗೆ ಸರಳೀಕರಣಗೊಳಿಸುವ ಬದಲಾಗಿ ಕೇವಲ ಅಧಿಕಾರಿಗಳು ಮತ್ತು ಮಧ್ಯವರ್ತಗಳಿಗೆ ಹಣ ಮಾಡುವ ದಂಧೆಯಾಗಿ ಮುಂದುವರಿಯಲು ಸ್ವತಃ ಸರ್ಕಾರವೇ ಅನುಕೂಲ ಮಾಡಿಕೊಟ್ಟಿದೆ ಎಂದು ಅವರು ಆರೋಪಿಸಿದರು.

ರೈಲ್ವೆ ಇಲಾಖೆ, ರಾಷ್ಟ್ರೀಯ ಹೆದ್ದಾರಿ ನಿರಕ್ಷೇಪಣಾ ಪತ್ರ ತರಲು ಮೈಸೂರು, ಹಾಸನಕ್ಕೆ ಹೋಗಬೇಕಾದ ಪರಿಸ್ಥಿತಿ ಎದುರಾಗಿದ್ದು, ಈ ಬಗ್ಗೆ ಸಭೆಯಲ್ಲಿ ನಿರ್ಣಯ ಕೈಗೊಂಡು ಸಕರ್ಾರಕ್ಕೆ ಮನವರಿಕೆ ಮಾಡಿ ಕೊಡಬೇಕು. ಇಲ್ಲಿನ ರಸ್ತೆ ಬದಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು ವಿಧಿಸಿರುವ ಷರತ್ತುಗಳನ್ನು ಐದು ಸೆಂಟ್ಸ್ ಜಮೀನಿನಲ್ಲಿ ಮನೆ ನಿರ್ಮಿಸುವುದಕ್ಕೂ ಅನ್ವಯಿಸುತ್ತಿರುವುದು ನಾಚಿಕೆಗೇಡು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಇನ್ನೊಂದೆಡೆ ತಾಲ್ಲೂಕಿನ ಅಮ್ಟೂರು ಗ್ರಾಮದ ಶಾಂತಿಪಲ್ಕೆ ಎಂಬಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಅಕ್ರಮವಾಗಿ ಅತಿಕ್ರಮಿಸಿಕೊಂಡಿದ್ದ ಸರ್ಕಾರಿ ಜಮೀನು ತೆರವುಗೊಳಿಸಲಾಗಿದ್ದರೂ ಮತ್ತೆ ಕೆಲವೊಂದು ವ್ಯಕ್ತಿಗಳು ಸ್ವಹಿತಾಸಕ್ತಿಗಾಗಿ ರಸ್ತೆಗೆ ಅಡ್ಡಿಪಡಿಸುತ್ತಿದ್ದಾರೆ. ಇದರಿಂದಾಗಿ ಇಲ್ಲಿನ ಕಾಲೊನಿಯ ಸುಮಾರು 30 ಪರಿಶಿಷ್ಟ ಮತ್ತು ಪಂಗಡ ಕುಟುಂಬಗಳಿಗೆ ಮನೆ ಕಟ್ಟಲು ಕೂಡಾ ಅಸಾಧ್ಯವಾಗಿದೆ ಎಂದು ಅವರು ಗಮನ ಸೆಳೆದರು. ಪುರಸಭಾ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿ ನೆಪದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ನಾಗರಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.ಪ್ರಮುಖರಾದ ರಾಜಾ ಪಲ್ಲಮಜಲು, ಹೊನ್ನಪ್ಪ ಕುಂದರ್, ಗಂಗಾಧರ ಕೋಟ್ಯಾನ್, ನಾರಾಯಣ ಪುಂಚಮೆ, ವೆಂಕಟೇಶ ಚೆಂಡ್ತಿಮಾರ್, ಸತೀಶ ಅರಳ ಮತ್ತಿತರರು ಚಚರ್ೆಯಲ್ಲಿ ಪಾಲ್ಗೊಂಡರು.ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಸಮಾಜ ಕಲ್ಯಾಣಾಧಿಕಾರಿ ಮೋಹನ ಕುಮಾರ್ ಮತ್ತಿತರರು ಇದ್ದರು.

By suddi9

Leave a Reply

Your email address will not be published. Required fields are marked *