ವಾಮಂಜೂರು: ಜುಲೈ 13ರಂದು ಸೈಂಟ್ ರೇಮಂಡ್ಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಶಾಲಾ ಸಭಾಂಗಣದಲ್ಲಿ ವಂದನೀಯ ರೇಮಂಡ್ ಕಾಮಿಲಸ್ ಮಸ್ಕರೇನ್ಹಸ್ ಅವರು ಸ್ಥಾಪಿಸಿದ ಬೆಥನಿ ಸಂಸ್ಥೆಯ ಸಂಸ್ಥಾಪನಾ ದಿನವನ್ನು ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಅಧ್ಯಕ್ಷರಾಗಿ ವಂದನೀಯ ಭಗಿನಿ ಸಾಧನರವರು ಮಾತನಾಡಿ ಬಡವರು, ಮಹಿಳೆಯರು, ಶೋಷಿತರ ಏಳಿಗೆಗಾಗಿ ಸೇವೆಸಲ್ಲಿಸಿದ ಫಾದರ್ ರೇಮಂಡರು ಅಮರರು ಎಂದು ಅವರ ಜೀವನದ ಯಶೋಗಾಥೆ ವಿವರಿಸಿದರು.

st.rmand

ವಿದ್ಯಾರ್ಥಿಗಳು, ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮ ಆರಂಭಿಸಿ, ನಾಟಕ ನೃತ್ಯವನ್ನು ಪ್ರಸ್ತುತಪಡಿಸಿದರು. ಹಾಗೂ ವಿದ್ಯಾರ್ಥಿಗಳು ಶಿಕ್ಷಕರೆಲ್ಲರೂ ಗುರುವಿನ ಭಾವಚಿತ್ರಕ್ಕೆ ಪುಷ್ಪಾಂಜಲಿ ಅರ್ಪಿಸಿದರು. ವಿದ್ಯಾರ್ಥಿ ಶೈನಾ ಹಾಗೂ ಐಶ್ವರ್ಯ ಕಾರ್ಯಕ್ರಮ ನಿರೂಪಿಸಿದರು. ಎಲ್ಲಾ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *