ಬೆಂಗಳೂರು: ರಾಜ್ಯ ಶಿಕ್ಷಣ ನೀತಿ ರೂಪಿಸುವಂತೆ ಆಗ್ರಹಿಸಿ ಸೆಪ್ಟೆಂಬರ್ 8 ರಂದು ಬೆಳಗ್ಗೆ 11 ಗಂಟೆಗೆ ಯುವ ನಾಯಕ ಅನಿಲ್ ಶೆಟ್ಟಿ ಮತ್ತು ಪ್ರಕಾಶ್ ಅಂಚನ್ ನೇತೃತ್ವದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳನ್ನು ಭೇಟಿಮಾಡಲು ಫ್ರೀಡಂ ಪಾರ್ಕಿನಿಂದ ವಿಧಾನಸೌಧಕ್ಕೆ ಕಾಲ್ನಡಿಗೆಯ ಮೂಲಕ ತೆರಳಲಿದ್ದಾರೆ.

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ 50 ಲಕ್ಷ ಮಕ್ಕಳ ಭವಿಷ್ಯ ನಮ್ಮ ಕೈಲಿದೆ. ಬನ್ನಿ, ಆಂದೋಲನದಲ್ಲಿ ಭಾಗವಹಿಸಿ “ರಾಜ್ಯ ಶಿಕ್ಷಣ ನೀತಿ” ರೂಪಿಸಲು ಸರ್ಕಾರವನ್ನು ಆಗ್ರಹಿಸೋಣ ಎಂದು ಹೇಳಿದ್ದಾರೆ.
