ವಿಟ್ಲ : ಜೂನ್ 09: ಶಿಕ್ಷಣ ಬದುಕನ್ನು ರೂಪಿಸುತ್ತದೆ ಶಿಕ್ಷಣದ ಪ್ರತಿ ಹಂತದಲ್ಲೂ ಪೋಷಕರು ಮಗುವಿನ ಜವಾಬ್ದಾರಿ ತೆಗೆದುಕೊಳ್ಳುವುದು ಅತೀ ಅಗತ್ಯ” ಎಂದು ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ -ರಕ್ಷಕ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯ ಪಿ.ಎಸ್. ಮೋಹನ್ ರವರು ಪೋಷಕರ ಪರವಾಗಿ ಮಾತನಾಡುತ್ತಾ ಹೇಳಿದರು.

pta

ಆಡಳಿತಾಧಿಕಾರಿ ಸಿ.ಶ್ರೀಧರ್ ಪ್ರಸ್ತಾವಿಕ ಮಾತುಗಳನ್ನಾಡುತ್ತಾ “ನಮ್ಮ ವಿನಂತಿಗೆ ಪ್ರೋತ್ಸಾಹಿಸುತ್ತಾ ನಮ್ಮೊಂದಿಗೆ ದಿಟ್ಟ ಹೆಜ್ಜೆ ಇರಿಸಿದ್ದೀರಿ , ಪೋಷಕರ ಪ್ರೋತ್ಸಾಹ ವಿಲ್ಲದೆ ಸಂಸ್ಥೆಯ ಚಟುವಟಿಕೆಗಳು ನಡೆಯಲು ಕಷ್ಟ ಸಾಧ್ಯ” ಎಂದರು. ಶಾಲಾ ಸಂಚಾಲಕರಾದ ಜೆ.ಪ್ರಹ್ಲಾದ್.ಶೆಟ್ಟಿಯವರು ಅಧ್ಯಕ್ಷೀಯ ಮಾತುಗಳನ್ನಾಡುತ್ತಾ ಶಾಲೆಯ ಮಕ್ಕಳ ಪುರೋಭಿವೃದ್ಧಿಯಲ್ಲಿ ಯಾವುದೇ ರೀತಿಯ ರಾಜಿ ಮಾಡಿಕೊಳ್ಳದೆ ನಮ್ಮ ಸಂಸ್ಥೆಯ ಭೋದಕ ವರ್ಗದವರು ಸೇವೆ ಸಲ್ಲಿಸುತ್ತಿದ್ದಾರೆ ಎಂದರು. ಶಿಕ್ಷಕ -ರಕ್ಷಕ ಸಂಘದ ಅಧ್ಯಕ್ಷರಾದ ಕೆ.ಬಾಲಕೃಷ್ಣ ಆಳ್ವ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿರುವ ಈ ವಿದ್ಯಾಸಂಸ್ಥೆ ಇದೀಗ ಉತ್ತಮ ದಾಖಲೆಯೊಂದಿಗೆ ಕಾರ್ಯ ನಿರ್ವಹಿಸುತ್ತಿದೆ ಈ ವಿದ್ಯಾಸಂಸ್ಥೆಯ ಮೇಲೆ ಜನರಿಗಿರುವ ಪ್ರೀತಿ ಇದು ನೀಡುತ್ತಿರುವ ಸೇವೆಯ ಪ್ರತೀಕವಾಗಿದೆ ಎಂದರು.
ಆಡಳಿತ ಮಂಡಳಿಯ ಅಧ್ಯಕ್ಷ ಬಿ.ಎಸ್.ನಾೈಕ್ ಶಿಕ್ಷಕ -ರಕ್ಷಕ ಸಂಘದ ಉಪಾಧ್ಯಕ್ಷೆ ಶ್ರೀಮತಿ ಲಕ್ಷ್ಮೀ , ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮೀ .ವಿ.ಶೆಟ್ಟಿ , ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಗ್ರೇಸ್.ಪಿ.ಸಲ್ಡಾನಾ , ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಇದೇ ಸಂದರ್ಭ ಕಳೆದ ಎಸೆಸೆಲ್ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಗಳಿಸಿದ ಹಾಗೂ ಶ್ರೇಣಿ ಪಡೆದ ವಿದ್ಯಾರ್ಥಿಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕಾರ್ಯಕಾರಿ ಸಮಿತಿ ಸದಸ್ಯೆ ಸೇವಂತಿಕಾ ರೈ ಗತವರ್ಷದ ಸಭೆಯ ವರದಿ ಮಂಡಿಸಿದರು. ಶಿಕ್ಷಕ -ರಕ್ಷಕ ಸಂಘದ ಉಪಾಧ್ಯಕ್ಷೆ ಲಕ್ಷ್ಮೀ ಲೆಕ್ಕ ಪತ್ರ ಮಂಡಿಸಿದರು. ಶಿಕ್ಷಕ -ರಕ್ಷಕ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರಾದ ಕಸ್ತೂರಿ ಪಿ.ಶೆಟ್ಟಿಯವರು ಸ್ವಾಗತಿಸಿ , ಶಿಕ್ಷಕಿ ರಶ್ಮಿ ಫೆರ್ನಾಂಡಿಸ್ ವಂದಿಸಿದರು. ಶಿಕ್ಷಕಿ ಮಮತಾ.ಎನ್. ಕಾರ್ಯಕ್ರಮ ನಿರ್ವಹಿಸಿದರು.

By suddi9

Leave a Reply

Your email address will not be published. Required fields are marked *