ಬಂಟ್ವಾಳ:ತಾಲ್ಲೂಕಿನ ಬಿ.ಸಿ.ರೋಡು ಸೋಷಿಯಲ್ ಡೆಮಾಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ ಇದರ 10ನೇ ವರ್ಷದ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ಇಲ್ಲಿನ ವಿವಿಧೆಡೆ ಗುರುವಾರ ತೆರಳಿ ಪಕ್ಷದ ವತಿಯಿಂದ ಧ್ವಜಾರೋಹಣ ಮತ್ತು ಸ್ವಚ್ಛತಾ ಆಂದೋಲನ ಹಾಗೂ ಶ್ರಮದಾನ ನಡೆಸಿದರು.

21 btl-Talapady
ಪಕ್ಷದ ಕ್ಷೇತ್ರಾಧ್ಯಕ್ಷ ಶಾಹುಲ್ ಹಮೀದ್ ಎಸ್.ಎಚ್. ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಭಯ ಮುಕ್ತ ಸಮಾಜ ಮತ್ತು ಹಸಿವು ಮುಕ್ತ ಭಾರತ ನಿರ್ಮಾಣವೇ ಪಕ್ಷದ ಮೂಲ ಉದ್ದೇಶ ಎಂದರು. ರಾಜ್ಯ ಸಮಿತಿ ಸದಸ್ಯ ಅನ್ವರ್ ಸಾದಾತ್ ಮಾತನಾಡಿದರು.

ಪುರಸಭಾ ಸದಸ್ಯರಾದ ಮಹಮ್ಮದ್ ಇಕ್ಬಾಲ್, ಮುನೀಶ್ ಅಲಿ, ಪಿಎಫ್‍ಐ ಬಂಟ್ವಾಳ ವಲಯಾಧ್ಯಕ್ಷ ಇಜಾಝ್ ಅಹ್ಮದ್, ಪ್ರಮುಖರಾದ ಇಸ್ಮಾಯಿಲ್ ಬಾವ, ಶಾಹುಲ್ ಹಮೀದ್, ಅಕ್ಬರ್ ಆಲಿ, ಮಸೀದಿ ಅಧ್ಯಕ್ಷ ಇದಿನಬ್ಬ, ಲತೀಫ್ ಕೆ.ಎಚ್., ಆರಿಫ್ ತಲಪಾಡಿ, ನಾಸಿರ್, ಇಸಾಕ್ ತಲಪಾಡಿ, ಉಸ್ಮಾನ್ ಎಂ.ಎ., ಆಸಿಫ್, ನವಾಝ್, ಫಹದ್, ರಿಝ್ವಾನ್, ನಿಸಾರ್, ಲತೀಫ್ ಬಿ.ಸಿ., ಸಲಾಂ, ರಶೀದ್, ರಮೀಝ್, ಸಬೀರ್, ಅನ್ವರ್ ಕೆ.ಎಚ್., ಆಶ್ರಫ್ ಬಿ.ಎಂ.ಟಿ., ನವಾಝ್ ಕೋಡಿಬೈಲ್, ಮೊಯಿದಿನಬ್ಬ ಕುಕ್ಕಾಜೆ, ಹಮೀದ್ ಮುಸ್ಲಿಯಾರ್, ಪತ್ರಕರ್ತ ಅನ್ಸಾರ್ ಮಂಚಿ, ಶರೀಫ್ ಕುಕ್ಕಾಜೆ, ಝಿಯಾರ್ ಮಂಚಿ, ನೌಫಲ್ ಕುಕ್ಕಾಜೆ, ಫೈಝಲ್ ಮಂಚಿ, ಡಿ.ಎನ್. ಫಾರೂಕ್ ಮಂಚಿ, ಅಬೂಬಕ್ಕರ್ ಮೆಲ್ಕಾರ್ ಮತ್ತಿತರರು ಪಾಲ್ಗೊಂಡಿದ್ದರು.

By suddi9

Leave a Reply

Your email address will not be published. Required fields are marked *