ಸುದ್ದಿ9ಮೂಡುಬಿದರೆ: ಇಲ್ಲಿನ ಜೈನಮಠದ ಧವಲತ್ರಯ ಟ್ರಸ್ಟ್ ವತಿಯಿಂದ ನಡೆಯುವ ಮಾಸಿಕ ತಾಳಮದ್ದಳೆ ಕೂಟವನ್ನು ಮಠದ ಶ್ರೀ ಚಾರುಕೀತರ್ಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಉದ್ಘಾಟಿಸಿದರು.
ನಂತರ ಆಶೀವರ್ಚನ ನೀಡಿದ ಸ್ವಾಮೀಜಿ, ಬಕಾಸುರ ವದೆಯಂತಹ ಪೌರಣಿಕ ಕಥೆಗಳು, ಮನುಷ್ಯನ ತಾಮಸಿಕ ಗುಣ ಯಾವ ರೀತಿ ನಿಗ್ರಹವಾಗುತ್ತದೆ ಎನ್ನುವುದನ್ನು ತಿಳಿಸಿಕೊಡುತ್ತದೆ. ನಮ್ಮಲ್ಲಿರುವ ಸಾತ್ವಿಕ ಗುಣಗಳನ್ನು ಅರಳಿಸಿ ಬುದ್ದಿಯನ್ನು ಚುರುಕುಗೊಳಿಸುತ್ತದೆ. ನಮ್ಮ ವಿವೇಕತೆಯನ್ನು ಜಾಗೃತಿಗೊಳಿಸುವುದರಿಂದ ಆದರ್ಶಪ್ರಾಯವಾಗುತ್ತದೆ ಎಂದು ನುಡಿದರು.
ಮಲ್ಪೆ ವಸುದೇವ ಸಾಮಗ, ಬಜಗೋಳಿ ಜೀವಂದರ್ ಜೈನ್, ಆರೋಹ ಶೈಲೇಂದ್ರ, ಬಾಹುಬಲಿ ಪ್ರಸಾದ್, ಪಟ್ನಶೆಟ್ಟಿ ಸುದೇಶ್ ಕುಮಾರ್, ಸಂಜಯಂತ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಬಕಾಸುರ ವದೆ ತಾಳಮದ್ದಲೆ ನಡೆಯಿತು.


