ಬೆಳಗಾವಿ: ಅಕ್ರಮ ಮರಳು ದಂಧೆ ಬಗ್ಗೆ ವರದಿಗೆಂದು ತೆರಳಿದ್ದ ಖಾಸಗಿ ವಾಹಿಣಿಯ ವರದಿಗಾರರ ಮೇಲೆ ಅಕ್ರಮ ದಂಧೆಕೊರರು ಹಲ್ಲೆ ನಡೆಸಿದ್ದಲ್ಲದೆ, ಟ್ರಕ್ ಹರಿಸುವ ಯತ್ನ ನಡೆಸಿರುವ ಘಟನೆ ಜಿಲ್ಲೆಯಲ್ಲಿ ಶುಕ್ರವಾರ ತಡವಾಗಿ ಬೆಳಕಿಗೆ ಬಂದಿದೆ.
ರವೀಂದ್ರ ದೊಡ್ಡಮನಿ ಹಲ್ಲೆಗೊಳಗಾದ ಖಾಸಗಿ ವಾಹಿನಿ ವರದಿಗಾರ ಎಂದು ಗುರುತಿಸಲಾಗಿದೆ.
ವರದಿಗಾರರಾದ ರವೀಂದ್ರ ದೊಡ್ಡಮನಿ, ಈಶ್ವರ ಗುಡಜ ಅವರು ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂಧೆ ಬಗ್ಗೆ ಗುರುವಾರ ವರದಿಗೆ ತೆರಳಿದ್ದರು. ಈ ವೇಳೆ ಟ್ರಕ್ ಚಾಲಕ ಮತ್ತು ಮಾಲಕ ಕಬ್ಬಿಣ ರಾಡ್ ನಿಂದ ಈಶ್ವರ ಗುಡಜರ ಮೇಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದ್ದು, ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರಗೆ ದಾಖಲಿಸಲಾಗಿದೆ.
ಈ ಬಗ್ಗೆ ಮಾಳಮಾರುತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿಯಲ್ಲಿ ಅಕ್ರಮ ದಂಧೆಕೊರರ ಹಾವಳಿ ಜಾಸ್ತಿ ಆಗಿದ್ದು, ಈ ಬಗ್ಗೆ ಹಲವು ಬಾರಿ ವರದಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕ್ರಮಕ್ಕೆ ಆಗ್ರಹ: ವರದಿಗಾರರ ಮೇಲೆ ಹಲ್ಲೆ ಮಾಡಿರುವ ಆರೋಪಿಗಳನ್ನು ಕೂಡಲೇ ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಹಾಗೂ ಕಮಿಷನರಿಗೆ ವರದಿಗಾರರು ಮನವಿ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ವರದಿಗಾರರಾದ ಭೀಮಸಿ, ತಳವಾರ, ಜಾನ್ಸ್ ಕುಮಾರ್, ಕರೆಪ್ಪಗೋಳ, ಪ್ರಸನ್ನ ಕುಮಾರ್ ಮತ್ತಿತರರಿದ್ದರು.



