KAR_9894

ಬಂಟ್ವಾಳ: ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಸಾರ್ವಜನಿಕ ಶಿಕ್ಷಣ ಇಲಾಖೆ, ತಾಲೂಕು ಪಂಚಾಯತ್, ಕಂದಾಯ ಇಲಾಖೆ ಹಾಗೂ ಇತರ ಸರಕಾರಿ ಇಲಾಖೆ ಸಹಯೋಗದೊಂದಿಗೆ ಆಯೋಜಿಸಿರುವ ಸಂಚಾರಿ ನ್ಯಾಯಾಲಯ ಅಭಿಯಾನ ಕಾರ್ಯಕ್ರಮ ಮತ್ತು  ಕಾನೂನು ಸಾಕ್ಷರತಾ ರಥಕ್ಕೆ ಹಿರಿಯ ಸಿವಿಲ್ ನ್ಯಾಯಾಧೀಶ ಮಹಮ್ಮದ್ ಇಮ್ತಿಯಾಜ್ ಅಹಮ್ಮದ್ ಚಾಲನೆ ನೀಡಿದರು.

ಈ ಸಂದರ್ಭ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಪ್ರತಿಭಾ ಡಿ.ಎಸ್., ತಾ.ಪಂ.ಕಾರ್ಯನಿರ್ವಹಣಾ ಅಧಿಕಾರಿ ರಾಜಣ್ಣ, ವಕೀಲರ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಜೈನ್, ದ.ಕ.ಕೇಂದ್ರ ಸರಕಾರಿ ವಕೀಲರಾದ ಪ್ರಸಾದ್ ಕುಮಾರ್ ರೈ, ಉಪಾಧ್ಯಕ್ಷ ಚಂದ್ರಶೇಖರ ಪುಂಚಮೆ, ಪ್ರಧಾನ ಕಾರ್ಯದರ್ಶಿ ಆಶಾ ಪ್ರಸಾದ್ ರೈ, ಜತೆ ಕಾರ್ಯದರ್ಶಿ ವಿನೋದ ಎಸ್., ಕೋಶಾಧಿಕಾರಿ ಚಂದ್ರಶೇಖರ ಬೈರಿಕಟ್ಟೆ, ನ್ಯಾಯವಾದಿಗಳಾದ ಸತೀಶ್ ಬಿ., ಆಶಾಮಣಿ ಡಿ.ರೈ, ಯಶೋಧ, ಸುರೇಶ್ ನಾವೂರು, ಶೈಲಜಾ ರಾಜೇಶ್, ವಿರೇಂದ್ರ ಎಂ.ಸಿದ್ದಕಟ್ಟೆ, ರಾಲ್ಫ್ ಎಲೆಕ್ಸ್ ಸಿಕ್ವೇರಾ, ರಿಚಾರ್ಡ್ ಡಿಕೋಸ್ತ, ಸಿಬ್ಬಂದಿ ನರಸಿಂಹ ಗೌಡ ಮತ್ತಿತರರು ಉಪಸ್ಥಿತರಿದ್ದರು.

 

By suddi9

Leave a Reply

Your email address will not be published. Required fields are marked *