rain-m-29-5

ಮಂಗಳೂರು: ದ.ಕ.ಜಲ್ಲಾದ್ಯಂತ ಸುರಿದ ಭಾರೀ ಮಳೆಗೆ ನಗರದ ಚರಂಡಿಗಳೆಲ್ಲಾ ತುಂಬಿ ರಸ್ತೆಗಳ ಮೇಲೆ ಹರಿದು ಬಳಿಕ ತಗ್ಗು ಪ್ರದೇಶದ ಮನೆ-ಅಂಗಡಿಗಳಿಗೆಲ್ಲಾ ನುಗ್ಗಿ ಜನ ಜೀವನ ಅಸ್ತವ್ಯಸ್ತವಾಗಿದೆ.

ನಗರದ ಪ್ರಮುಖ ಬೀದಿಗಳಲ್ಲಿ ಸೂಕ್ತ ಒಳಚರಂಡಿ ವ್ಯವಸ್ಥೆಗಳು ಇಲ್ಲದ ಪರಿಣಾಮ ಕೃತಕ ನೆರೆ ಉಂಟಾಗಿ ಪ್ರಾಯಾಣಿಕ ಅಕ್ಷರಶಃ ನರಕಯಾತನೆ ಅನುಭವಿಸಿದ್ದಾರೆ.

ಇನ್ನು ಪರಿಸ್ಥಿತಿ ಅರಿತ ಅಗ್ನಿಶಾಮಕ ದಳ, ವಿವಿಧ ಸಂಘಸಂಸ್ಥೆಗಳ ಸ್ವಯಂಸೇವಕರು ಹಾಗೂ ನಾಗರಿಕರು ತಮ್ಮ ತಮ್ಮ ಪ್ರದೇಶಗಳಲ್ಲಿ ನೆರೆನೀರಿಗೆ ಸಿಲುಕಿದವರ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡರು, ಇತ್ತ ಕೆಲವರು ಸಂಚಾರ ನಿಯಂತ್ರಣ ಕಾರ್ಯದಲ್ಲೂ ಪೊಲೀಸರಿಗೆ ನೆರವು ನೀಡಿದರು.

ಸ್ಮಾರ್ಟ್ ಸಿಟಿಯಾಗುವತ್ತ ಸಾಗುತ್ತಿರುವ ಮಂಗಳೂರು ನಗರಕ್ಕೆ ಈ ರೀತಿಯ ಪ್ರಾಕೃತಿಕ ವಿಪತ್ತುಗಳು ಅಪ್ಪಳಿಸಿದಾಗ ನಗರ ಸ್ವರೂಪದ ಬಂಡವಾಳ ಬಯಲಾಗುತ್ತದೆ. ಇನ್ನಾದರೂ ಇಲ್ಲಿನ ಜನಪ್ರತಿನಿಧಿಗಳು, ಅಧಿಕಾರಿ ವರ್ಗದವರು ಮಂಗಳೂರಿಗರ ಬದುಕನ್ನು ಸಹ್ಯವಾಗಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುತ್ತಾರೋ ಎಂಬುದು ದೀಗ ಯಕ್ಷ ಪ್ರಶ್ನೆಯಾಗಿ ಉಳಿದಿದೆ.

 

By suddi9

Leave a Reply

Your email address will not be published. Required fields are marked *