ಮಂಗಳೂರು: ನಗರದಾದ್ಯಂತ ನೆರೆ ನೀರಿನಿಂದ ಸಾರ್ವಜನಿಕರು ತೊಂದರೆಗೊಳಗಾಗಿರುವುದರಿಂದ ನಗರವಾಸಿಗಳಿಗೆ ತುರ್ತು ಔಷಧಿಗಳು ಅಥವಾ ವೈದ್ಯಕೀಯ ನೆರವಿನ ಅಗತ್ಯವನ್ನು ಪೂರೈಸಲು ಟೀಂ ಹೆಲ್ತ್ –ಇ ಎಂಬ ಉತ್ಸಾಹಿಗಳ ತಂಡವು ಯಾವುದೇ ಸರ್ವಿಸ್ ಚಾರ್ಜ್ ಇಲ್ಲದೇ ನಿಮ್ಮ ಮನೆ ಬಾಗಿಲಿಗೆ ಔಷಧಿಗಳನ್ನು ತಲುಪಿಸುವ ಉತ್ತಮ ಕಾರ್ಯವನ್ನು ಮಾಡುತ್ತಿದೆ. ದಯವಿಟ್ಟು ಈ ಸೇವೆಯ ಸದುಪಯೋಗವನ್ನು ಮಂಗಳೂರು ನಗರವಾಸಿಗಳು ಪಡೆದುಕೊಳ್ಳಿ, ನೀವು ಮಾಡಬೇಕಾಗಿರುವುದಿಷ್ಟೇ : ತುರ್ತು ಔಷಧಿಗಳಿಗೆ ನಿಮ್ಮ ಬಳೀಯಿರುವ ಮೆಡಿಕಲ್ ಪ್ರಿಸ್ಕ್ರಿಪ್ಷನ್ ಅನ್ನು 9148247777 ಸಂಖ್ಯೆಗೆ ವಾಟ್ಸ್ಯಾಪ್ ಮಾಡಿ ಎಂದು ತಂಡದ ನೀರವ್ ಭಂಡಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

