ಬಂಟ್ವಾಳ: ತಾಲೂಕು ಗುತ್ತಿಗೆದಾರರ ಸಂಘದ ನೂತನ ಅಧ್ಯಕ್ಷರಾಗಿ ನಾಗೇಶ್ ಕುಲಾಲ್ ನರಿಕೊಂಬು ಅವರು ಆಯ್ಕೆಯಾಗಿದ್ದಾರೆ. ಉಳಿದಂತೆ ಪದಾಧಿಕಾರಿಗಳಾಗಿ ಅಮ್ಮು ರೈ, ನರ್ಸಪ್ಪ ಪೂಜಾರಿ ನಿಡ್ಯ, ಮಾರ್ಷಲ್ ಪಾಯಸ್, ವಳಚ್ಚಿಲ್ ಖಾದರ್ ( ಗೌರವಾಧ್ಯಕ್ಷರು), ಎಸ್.ನಾರಾಯಣ, ಪದ್ಮನಾಭ ವೀರಕಂಭ, ವಸಂತ ಕಜೆಕಾರು, ಎನ್.ರಿಯಾಜ್, ಬಾಲಕೃಷ್ಣ ಸೇರ್ಕಳ ( ಉಪಾಧ್ಯಕ್ಷರು), ಶಮೀರ್ ಪಜೀರ್(ಪ್ರಧಾನ ಕಾರ್ಯದರ್ಶಿ), ಸಾಹುಲ್ ಹಮೀದ್ ( ಜತೆ ಕಾರ್ಯದರ್ಶಿ), ಕೆ.ಶೈಲೇಶ್ ಪೂಜಾರಿ( ಸಂಘಟನಾ ಕಾರ್ಯದರ್ಶಿ), ಚಿತ್ತರಂಜನ್ ಕಲ್ಲಡ್ಕ ( ಕೋಶಾಧಿಕಾರಿ) ಅವರು ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಸಂಘದ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆದಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ. 

