ಬಂಟ್ವಾಳ: ಪ್ರತಿಯೊಂದು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಂದುಕೊರತೆಗಳನ್ನು ನಿವಾರಿಸಲು ಶಾಸಕನಾಗಿ ನನ್ನ ಶಕ್ತಿ ಮೀರಿ ಪ್ರಯತ್ನಿಸುವುದಾಗಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದ್ದಾರೆ.ಸೋಮವಾರ ಸಂಜೆ ನರಿಕೊಂಬು ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧಡೆಯಲ್ಲಿ ಸುಮಾರು 71 ಲಕ್ಷ ವೆಚ್ಚದ ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

ಈ ಭಾಗದ ಜನರ ಬೇಡಿಕೆಗಳನ್ನು ಹಾಗೂ ಎಲ್ಲಾ ಅಭಿವೃದ್ಧಿ ಕಾಮಗಾರಿಗಳನ್ನುಹಂತ,ಹಂತವಾಗಿ ಪೂರೈಸಲಾಗುವುದು ಎಂದ ಶಾಸಕರು ಭರವಸೆ ನೀಡಿದರು.
*ಕಾಮಗಾರಿಗಳ ವಿವರ* ಶಂಭೂರು ಗ್ರಾಮದಲ್ಲಿ 20 ಲಕ್ಷ ವೆಚ್ಚದಲ್ಲಿ ಶಂಭೂರು -ಕೂಡಿಬೆಟ್ಟು ರಸ್ತೆ, 5 ಲಕ್ಷ ವೆಚ್ಚದಲ್ಲಿ ಮಂಜನಕೋಡಿ ರಸ್ತೆ , 10 ,ಲಕ್ಷ ವೆಚ್ಚದಲ್ಲಿ ಕುಂದಾಯಗೋಳಿ ಮಂಜಿಪಾಲ್- ಜೋಗಿಬೆಟ್ಟು ರಸ್ತೆ , 20 ಲಕ್ಷ ವೆಚ್ಚದಲ್ಲಿ ಬೈಪಾಡಿ -ಶಿರ್ಡಿ ರಸ್ತೆ ಕಾಂಕ್ರೀಟ್ ರಸ್ತೆಯನ್ನು ಶಾಸಕರು ಉದ್ಘಾಟಿಸಿದರು.
ಇದೇವೇಳೆ16 ಲಕ್ಷ ವೆಚ್ಚದಲ್ಲಿ ಶಂಭೂರು ಶೇಡಿಗುರಿ ನೂತನ ಅಂಗನವಾಡಿ ಕಟ್ಟಡ ಕ್ಕೆ ಶಿಲಾನ್ಯಾಸ ನೆರವೇರಿಸಿದರು.ಬಳಿಕ ಶಂಭೂರು ಇರಂತಬೆಟ್ಟು ಸುಧೆಕಾರ್ ರಸ್ತೆ ಹಾಗೂ ಶಂಭೂರು ಬರ್ಕೆ ಕಕ್ಕೆಮಜಲು ಮೂಲಕ ಕಲ್ಲಡ್ಕ ಸಂಪರ್ಕದ ರಸ್ತೆಯನ್ನು ವೀಕ್ಷಿಸಿದ ಶಾಸಕರು, ಈ ರಸ್ತೆಯ ಅಭಿವೃದ್ದಿಗೆ ಅನುದಾನ ಕೋರಿ ಪ್ರಸ್ತಾವನೆಯನ್ನು ಈಗಾಗಲೇ ಸರಕಾರಕ್ಕೆ ಸಲ್ಲಿಸಲಾಗಿದ್ದು , ಶೀಘ್ರವಾಗಿ ಮಂಜೂರಾತಿ ದೊರೆಯುವ ನಿರೀಕ್ಷೆ ಇದೆ ಎಂದು ಶಾಸಕ ರಾಜೇಶ್ ನಾಯ್ಕ್ ಪಕ್ಷದ ಸ್ಥಳೀಯ ಮುಖಂಡರ ಗಮನಕ್ಕೆ ತಂದರು. ವಿವಿಧ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಗ್ರಾಮಸ್ಥರು ಮನವಿ ಶಾಸಕರಿಗೆ ಮನವಿ ಸಲ್ಲಿಸಿದರು.
ಶಂಭೂರಿನ ಬೈಪಾಡಿ ದಕ್ಷಿಣ ಶಿರ್ಡಿ ಮಂದಿರ ರಸ್ತೆ ಉದ್ಘಾಟನೆಯ ಬಳಿಕ ಶಾಸಕರು ಶಿರ್ಡಿ ಮಂದಿರಕ್ಕು ಭೇಟಿ ನೀಡಿ ದೇವರ ದರ್ಶನ ಪಡೆದರು. ಈ ಸಂದರ್ಭದಲ್ಲಿ ದೇವಸ್ಥಾನ ದ ವತಿಯಿಂದ ಶಾಸಕರನ್ನು ಸನ್ಮಾನಿಸಲಾಯಿತು. ಜಿ.ಪಂ.ಸದಸ್ಯೆ ಕಮಲಾಕ್ಷಿ ಕೆ.ಪೂಜಾರಿ, ಬಂಟ್ವಾಳ ಕ್ಷೇತ್ರ ಬಿಜೆಪಿ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿ, ಕಾರ್ಯದರ್ಶಿಗಳಾದ ರಮಾನಾಥ ರಾಯಿ, ಪುರುಷೋತ್ತಮ ಶೆಟ್ಟಿ ವಾಮದಪದವು, ಹಿಂದುಳಿದ ಮೋರ್ಚಾದ ಅಧ್ಯಕ್ಷ ಆನಂದ ಶಂಭೂರು, ಗ್ರಾ.ಪಂ.ನಿಕಟಪೂರ್ವ ಅಧ್ಯಕ್ಷ ಯಶೋಧರ ಕರ್ಬೆಟ್ಟು,ಶಂಭೂರು ಬೂತ್ ಸಮಿತಿ ಅಧ್ಯಕ್ಷರುಗಳಾದ ಯೋಗೀಶ್ , ಸಂತೋಷ್, ಕಾರ್ಯದರ್ಶಿಗಳಾದ ಕೇಶವ, ಪ್ರಕಾಶ್, ಕ್ಷೇತ್ರ ಸಮಿತಿ ಸದಸ್ಯ ಜಿನರಾಜ್ ಕೋಟ್ಯಾನ್, ಪ್ರಮುಖರಾದ ದಿವಾಕರ ಶಂಭೂರು, ಉದಯರಾಜ, ಜಯರಾಜ, ಬೋಜರಾಜ್, ಜಿನ್ನಪ್ಪ, ಶಿರ್ಡಿ ಸಾಯಿ ಮಂದಿರದ ಅಧ್ಯಕ್ಷ ಸೂರಜ್ ಕುಮಾರ್ ಬೋಳಾರ ಮತ್ತಿತರರು ಉಪಸ್ಥಿತರಿದ್ದರು.ಕೊನೆಗೆ
ಶಂಭೂರು ಹಳ್ಳಿ ಮನೆ ಉಪ್ಪಿನಕಾಯಿ ಉತ್ಪಾದನಾ ಕೇಂದ್ರಕ್ಕು ಶಾಸಕರು ಭೇಟಿ ನೀಡಿದರು.
