ಮೂಡುಬಿದಿರೆ: ಶೋರಿನ್ ರಿಯೂ ಕರಾಟೆ ಅಸೋಸಿಯೇಶನ್ ಮತ್ತು ಎಂ.ಕೆ.ಅನಂತರಾಜ್ ದೈಹಿಕ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಶನಿವಾರ ಗಂಜಿಮಠ ವಂಡೇಲಾ ಹಾಲ್ನಲ್ಲಿ ನಡೆದ 16 ನೇ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್ಶಿಪ್ನಲ್ಲಿ ಮಂಗಳೂರಿನ ರೆಡ್ ಕ್ಯಾಮಲ್ಸ್ ಸ್ಕೂಲ್ 2018 ರ ಚಾಂಪಿಯನ್ಶಿಪ್ ಪ್ರಶಸ್ತಿಯನ್ನು ಪಡೆಯಿತು.

ರನ್ನರಪ್ ಪ್ರಶಸ್ತಿಯನ್ನು ಮೂಡುಬಿದಿರೆಯ ಅಲ್ ಫುರ್ಖಾನ್ ಇಸ್ಲಾಮಿಕ್ ಸ್ಕೂಲ್ ಪಡೆಯಿತು. ತೃತೀಯ ಪ್ರಶಸ್ತಿಯನ್ನು ಅಡ್ಯಾರ್ನ ಬರಕಾ ಇಂಟರ್ ನ್ಯಾಷನಲ್ ಸ್ಕೂಲ್ ಪಡೆಯಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಧನಂಜಯ ಶೆಟ್ಟಿ ವಹಿಸಿದ್ದರು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಅಭಯಚಂದ್ರ ಜೈನ್, ರೆಡ್ ಕ್ಯಾಮಲ್ ಶಾಲೆಯ ಪ್ರಾಚಾರ್ಯ ಆಶಾಲತಾ ಸೋನ್ಸ್, ಮಹಮ್ಮದ್ ನವಾಜ್, ಶೀರಿನ್ ರಿಯೂ ಕರಾಟೆಯ ಮುಖ್ಯ ಶಿಕ್ಷಕ ಶಿಹಾನ್ ನದೀಮ್ ಹಾಗೂ ಸಂಘಟನೆ ಕಾರ್ಯದರ್ಶಿ ರಾಜೇಶ್ ಉಪಸ್ಥಿತರಿದ್ದರು.
ಕರಾಟೆ ಸ್ಪರ್ಧೆಯಲ್ಲಿ ನಿತ್ಯಾನಂದ ಕೆಮ್ಮಣ್ಣು, ಸತೀಶ್ ಬೆಳ್ಮಣ್, ರೋಹಿತಾಕ್ಷ, ಸುಂದರಂ, ರಹಿಮಾನ್, ಅಮೃತ್, ಪ್ರಶಾಂತ್ ಶೆಟ್ಟಿ ಮುಖ್ಯ ತೀರ್ಪುಗಾರರಾಗಿದ್ದರು.
