ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗದ ವತಿಯಿಂದ ಪೋಸ್ಟರ್ ಮೇಕಿಂಗ್, ಪ್ರದರ್ಶನ ಹಾಗೂ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

 

Alvas Postar Making (1)

Alvas Postar Making (2)
ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಒಟ್ಟು 28 ವಿಷಯಗಳಿಗೆ ಸಂಬಂದಪಟ್ಟ ಪೋಸ್ಟರ್‍ಗಳನ್ನು ನಿರ್ಮಾಣ ಮಾಡಿದರು. ಸೆಲ್ಪ್ ಹೆಲ್ಪ್ ಗ್ರೂಪ್ಸ್, ಐಡಿಬಿಐ, ಸಿಡೋ, ಕೆಎಸ್‍ಎಫ್‍ಸಿ, ಎಂಎಫ್‍ಐ, ಎಸ್‍ಐಡಿಬಿಐ, ಮುದ್ರಾ, ಐಐಈ, ನಾಬಾರ್ಡ ಪೋಸ್ಟರ್‍ಗಳು ಗಮನ ಸೆಳೆದವು. ತೀರ್ಪುಗಾರರಾಗಿ ಆಳ್ವಾಸ್ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ಉಪನ್ಯಾಸಕಿ ಡಾ ಶೇರ್ಲಿ ಟಿ. ಬಾಬು ಹಾಗೂ ಸವಿತಾ ಸುವರ್ಣ ಆಗಮಿಸಿದ್ದರು.
ಸ್ನಾತಕೋತ್ತರ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ರೆನಿಟಾ ಪಿಂಟೋ ಪ್ರಥಮ ಹಾಗೂ ರಕ್ಷಾ ಜೈನ್ ದ್ವಿತೀಯ ಬಹುಮಾನವನ್ನು ಪಡೆದರು.
ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕ ಪವನ್ ಕಿರಣಕೆರೆ ಮಾರ್ಗದರ್ಶನದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ದಾಖಲೀಕರಣ ವಿಭಾಗದ ಫ್ಲೇಮಿಂಗ್ ಮತ್ತು ಸುಶ್ಮಿತಾ ಹಾಗೂ ವಿಭಾಗದ ಉಪನ್ಯಾಸಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರಗತಿ ಶೆಟ್ಟಿ ಸ್ವಾಗತಿಸಿದರು. ಶಿಫಾಲಿ ಶೆಟ್ಟಿ ಕಾರ್ಯಕ್ರಮದ ವಿವರ ನೀಡಿದರು. ರಕ್ಷಾ ಶೆಟ್ಟಿ ವಂದಿಸಿ, ರೆನಿಟಾ ಪಿಂಟೊ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *