ಮೂಡುಬಿದಿರೆ: ಇಲ್ಲಿನ ಹೋಟೆಲ್ ಪಂಚರತ್ನ ಇಂಟರ್‍ನ್ಯಾಷನಲ್‍ನಲ್ಲಿ ಸೆ. 15ರಿಂದ 17ರವರೆಗೆ `ತನಿಷ್ಕ್’ ಆಭರಣಗಳ ಪ್ರದರ್ಶನ ಹಾಗೂ ಮಾರಾಟ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಈ ಪ್ರದರ್ಶನವನ್ನು ಶನಿವಾರ ಚಾಲನೆ ನೀಡಲಾಯಿತು.

ಮಾಜಿ ಸಚಿವ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಪ್ರದರ್ಶನ ಹಾಗೂ ಮಾರಾಟಕ್ಕೆ ಚಾಲನೆ ನೀಡಿದ ನಂತರ ಮಾತನಾಡಿ, ಭಾರತೀಯ ಮಹಿಳೆಯರು ಸೌಂದರ್ಯಪ್ರಜ್ಞೆಯಿಂದ ಬಳಸುವ ಚಿನ್ನಾಭರಣಗಳು ಬದುಕಿನ ಭದ್ರತೆಗೂ ಅನುಕೂಲವಾಗುತ್ತದೆ. ಆಭರಣ ವಿನ್ಯಾಸ ಹಾಗೂ ಮಾರಾಟದಲ್ಲಿ ಗುಣಮಟ್ಟವನ್ನು ಕಾಯ್ದಿರಿಸಿಕೊಂಡು ಬರುತ್ತಿರುವ ಕಂಪೆನಿಯ ಅಂಗಸಂಸ್ಥೆಯಾಗಿರುವ `ತನಿಷ್ಕ್ ‘ ತನ್ನ ಉತ್ಕøಷ್ಟ ಸೇವೆಯನ್ನು ನೀಡುತ್ತಿದೆ. ತನಿಷ್ಕ್ ಶಾಖೆ ಮೂಡುಬಿದಿರೆಯಲ್ಲಿ ಪ್ರಾರಂಭಗೊಂಡು ಗ್ರಾಹಕರ ಪ್ರೀತಿ ಗಳಿಸಲಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ಇನ್ನರ್‍ವೀಲ್ ಮಾಜಿ ಅಧ್ಯಕ್ಷೆ ಜಯಶ್ರೀ ಅಮರನಾಥ ಶೆಟ್ಟಿ, ಬಿಜೆಪಿ ದ.ಕ. ಜಿಲ್ಲಾ ಉಪಾಧ್ಯಕ್ಷ ಕೆ. ಪಿ. ಜಗದೀಶ ಅ„ಕಾರಿ, ಉದ್ಯಮಿ ಬಿ. ಕೀರ್ತಿವರ್ಮ, ಹೋಟೆಲ್ ಪಂಚರತ್ನದ ಆಡಳಿತ ನಿರ್ದೇಶಕ ತಿಮ್ಮಯ್ಯ ಭಾಗವಹಿಸಿದರು.

ಉನ್ನತ ಕೌಶಲ್ಯ, ಉತ್ಕøಷ್ಟ ವಿನ್ಯಾಸ, ಗುಣಮಟ್ಟಕ್ಕಾಗಿ ಹೆಸರಾಗಿರುವ `ತನಿಷ್ಕ್’ ದೇಶದಲ್ಲೇ ಅತಿ ವಿಶ್ವಾಸನೀಯ ಜ್ಯುವೆಲ್ಲರಿ ಬ್ರಾಂಡ್ ಆಗಿ ಮನ್ನಣೆ ಗಳಿಸಿದೆ. 22 ಮತ್ತು 18 ಕ್ಯಾರೆಟ್ ಚಿನ್ನದ 5000 ಬಗೆಯ ಸಾಂಪ್ರದಾಯಿಕ, ಸಮಕಾಲೀನ ಮತ್ತು ಸಂಮಿಶ್ರ ಶೈಲಿಯ ಆಭರಣಗಳು, ಚಿನ್ನ, ರತ್ನ ಸೆಟ್ ಜ್ಯುವೆಲ್ಲರಿಗಳಿಗಾಗಿ ತನಿಷ್ಕ್ ಪ್ರಸಿದ್ಧವಾಗಿದೆ. ಚಿನ್ನದ ಪರಿಶುದ್ಧತೆ ಅಳೆಯುವ ಕ್ಯಾರೆಟ್‍ಮೀಟರ್‍ಮೂಲಕ ಚಿನ್ನದ ಪರಿಶುದ್ಧತೆ ಅಳೆಯಲಾಗುತ್ತಿದೆ. ಚಿನ್ನದ ಆಭರಣಗಳ ತಯಾರಿಕಾ ಶುಲ್ಕದ ಮೇಲೆ ಮತ್ತು ಡೈಮಂಡ್ ಆಭರಣಗಳ ಮೇಲೆ ನೇರವಾಗಿ ಶೇ. 10 ಕಡಿತ ಈ ಪ್ರದರ್ಶನದ ಕೊಡುಗೆಯಾಗಿದೆ ಎಂದು `ತನಿಷ್ಕ್’ ಮಂಗಳೂರು ಮಳಿಗೆಯ ಆಡಳಿತ ನಿರ್ದೇಶಕ ಖಾದರ್ ಹಾರೂನ್ ತಿಳಿಸಿದರು.

ಭಾರತದಾದ್ಯಂತ 143 ನಗರಗಳಲ್ಲಿ 265 ಮಳಿಗೆಗಳನ್ನು ಹೊಂದಿರುವ `ತನಿಷ್ಕ್’ ನ ದ.ಕ. ಜಿಲ್ಲೆಯ ಏಕಮಾತ್ರ ಶಾಖೆಯು ಮಂಗಳೂರಿನಲ್ಲಿ ಸೇವಾನಿರತವಾಗಿದೆ. ಶೀಘ್ರದಲ್ಲೇ ಇನ್ನೊಂದು ಶಾಖೆಯನ್ನು ತೆರೆಯಲು ಯೋಜಿಸಲಾಗುತ್ತಿದೆ’ ಎಂದು ಅವರು ತಿಳಿಸಿದರು. ಸ್ಟೋರ್ ಮ್ಯಾನೇಜರ್ ಅಕ್ಷಯ್ ಸಹಿತ ಮಂಗಳೂರು ತನಿಷ್ಕ್‍ನ ಸಿಬಂದಿಗಳು ಉಪಸ್ಥಿತರಿದ್ದರು. ಡಿಜೆ ಶ್ಯಾಮ್ ನಿರೂಪಿಸಿದರು.
