1200px-SDPI_Flag

ಮಂಚಿ: ಇಲ್ಲಿನ ಗ್ರಾಮ ಪಂಚಾಯತ್’ಗೆ ಒಳಪೆಟ್ಟ ಪುತ್ತುಮುಡಿ ವ್ಯಾಪ್ತಿಯ ಅಂತುಕೊಡಿ ಎಂಬಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಇತ್ತೀಚೆಗೆ ಖರೀದಿಸಿದ ಜಮೀನಿಗೆ ಹೊಂದಿಕೊಂಡಿರುವ ಕಂಚಿನಡ್ಕ ಪದವು,ಸಜಿಪ,ಇರಾ ಹಾಗು ಇನ್ನಿತರ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಸಾರ್ವಜನಿಕ ರಸ್ತೆಯನ್ನು ಅತಿಕ್ರಮಿಸಿರುವ ಕಾರಣ ರಸ್ತೆಯು ಇದೀಗ ಅಪಾಯಕಾರಿ ಸ್ಥಿತಿಯಲ್ಲಿದೆ ಎಂದು ಎಸ್ ಡಿಪಿಐ ಮಂಚಿ ವಲಯ ಸಮಿತಿ ಅಧ್ಯಕ್ಷ ಫೈಝಲ್ ಮಂಚಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಗ್ರಾಮಸ್ಥರು ಸುಮಾರು ಒಂದು ತಿಂಗಳ ಹಿಂದೆ ನಡೆದ ಸಾಮಾನ್ಯ  ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದಾಗ ಅತಿಕ್ರಮಿಸಿ ಹಾಕಿದ ತಂತಿ ಬೇಲಿಯನ್ನು ತೆಗೆಯಲು ನಾವು ಈಗಾಗಲೇ ಸಂಬಂದಿಸಿದ ಆಧಿಕಾರಿಗಳಿಗೆ ವಿಷಯವನ್ನು ಪ್ರಸ್ತಾಪಿಸಿದ್ದು, ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಪಂಚಾಯತ್ ಅಧಿಕಾರಿಗಳು ಭರವಸೆಯನ್ನು ನೀಡಿದ್ದರು. ಗ್ರಾಮ ಪಂಚಾಯತ್ ಸಭೆ ನಡೆಯುವ ನಾಲ್ಕು ತಿಂಗಳ ಹಿಂದೆಯೇ ಈ ರಸ್ತೆ ಆತಿಕ್ರಮಣ ನಡೆದಿದ್ದು, ಪಂಚಾಯತ್  ಅಧಿಕಾರಿಗಳ ಗಮನಕ್ಕೆ ಕೂಡ ಬಂದಿದೆ ಎಂದು ಹೇಳಿದ್ದಾರೆ.

ಇದೀಗ ಸಾಮಾನ್ಯ ಸಭೆ ಕಳೆದು ಒಂದೂವರೆ ತಿಂಗಳು ಕಳೆದರೂ ಗ್ರಾಮಸ್ಥರಿಗೆ  ಯಾವುದೇ ಮಾಹಿತಿಯನ್ನು ಪಂಚಾಯತ್ ಕಡೆಯಿಂದ ನೀಡಲಾಗಿಲ್ಲ. ಅಲ್ಲದೆ, ಅತಿಕ್ರಮಣದ ವಿರುದ್ಧ ಪಂಚಾಯತ್ ಈ ವ್ಯಕ್ತಿಗೆ ನೋಟಿಸ್ ನೀಡಿ ಎರಡು ತಿಂಗಳು ಕಳೆದರೂ ಇದುವರೆಗೆ ಪಂಚಾಯತ್ ಯಾವುದೇ ಕ್ರಮಕೈಗೊಳ್ಳದ ಕಾರಣ ಪಂಚಾಯತ್ ಅಧಿಕಾರಿಗಳು ಕೂಡ ಈ ಅತಿಕ್ರಮಣದಲ್ಲಿ ಶಾಮೀಲಾಗಿದ್ದಾರೆಂದು ಗ್ರಾಮಸ್ಥರಲ್ಲಿ ಶಂಕೆ ಮೂಡಿದೆ ಎಂದು ಆರೋಪಿಸಿದ್ದಾರೆ.

ಈ ಪ್ರಕರಣವನ್ನು ಶೀಘ್ರದಲ್ಲಿ ಪ್ರಕರಣ ಬಗೆಹರಿಸಲು ಎಸ್ ಡಿಪಿಐ ಮಂಚಿ ವಲಯ ಸಮಿತಿ ಆಗ್ರಹಿಸುತ್ತಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *