ಬಂಟ್ವಾಳ: ಹಾಡುಹಗಲೇ ಕಛೇರಿಗೆ ನುಗ್ಗಿದ ಮುಸುಕುಧಾರಿಗಳ ಗುಂಪೊಂದು ಗ್ರಾ.ಪಂ. ಉಪಾಧ್ಯಕ್ಷರಮೇಲೆ ತಲವಾರು ದಾಳಿ ನಡೆಸಿ , ಕೊಲೆಗೈದ ಭೀಕರ ಘಟನೆ ತಾಲೂಕಿನ ಕರೋಪಾಡಿ ಗ್ರಾಮಪಂಚಾಯತ್ ಕಛೇರಿಯಲ್ಲಿ ನಡೆದಿದೆ.ಬಂಟ್ವಾಳ ತಾಲೂಕು ಪಂಚಾಯತ್ ನ ಹಿರಿಯ ಸದಸ್ಯ ಉಸ್ಮಾನ್ ಕರೋಪಾಡಿಯವರ ಪುತ್ರ, ಕರೋಪಾಡಿ ಗ್ರಾಮಪಂಚಾಯತ್ ಉಪಾಧ್ಯಕ್ಷ ಜಲೀಲ್ ಕರೋಪಾಡಿ(36) ಕೊಲೆಗೀಡಾದ ದುರ್ದೈವಿ.Untitled-1

IMG-20170420-WA0125

IMG-20170420-WA0127

IMG-20170420-WA0130

IMG-20170420-WA0132

ಇವರು ಇಂದು ಬೆಳೆಗ್ಗೆ ಗ್ರಾ.ಪಂ. ಕಛೇರಿಯಲ್ಲಿ ಕುಳಿತ್ತಿದ್ದ ವೇಳೆ ಎರಡು ಬೈಕ್ ಗಳಲ್ಲಿ ಬಂದ ಮುಸುಕುಧಾರಿಗಳ ತಂಡ ತಲವಾರು ದಾಳಿ ನಡೆಸಿ, ಪರಾರಿಯಾಗಿದೆ, ಗಂಭೀರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ, ಜಲೀಲ್ ರನ್ನು ತಕ್ಷಣ ದೇರಳಕಟ್ಟೆ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಯಿತಾದರೂ, ಚಕಿತ್ಸೆಗೆ ದೇಹ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಕೇರಳ ಕಡೆಯಿಂದ ಬಂದ ದುಷ್ಕರ್ಮಿಗಳು ಈ ಕೃತ್ಯ ವೆಸಗಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ ಬೊರಸೆ ಮಾರ್ಗದರ್ಶನದಲ್ಲಿ , ಡಿವೈಎಸ್ಪಿ ರವೀಶ್ ಕುಮಾರ್, ವೃತ್ತ ನಿರೀಕ್ಷಕ ಮಂಜಯ್ಯ ಹಾಗೂ ವಿಟ್ಲ ಠಾಣಾಧಿಕಾರಿ ನಾಗರಾಜ್ ತನಿಖೆ ಆರಂಭಿಸಿದ್ದಾರೆ.

By Suddi9

Leave a Reply

Your email address will not be published. Required fields are marked *