ಮೂಡುಬಿದಿರೆ: ಜೈನ ಪ್ರೌಢಶಾಲಾ ನಿವೃತ್ತ ಮುಖ್ಯ ಶಿಕ್ಷಕ, ತಮನಂಗಡಿ ಮನೆತನದ ಹಿರಿಯರಾದ ಎಂ. ಆದಿರಾಜ್ (94) ಮಾ.9ರಂದು ಜೈನಪೇಟೆಯಲ್ಲಿರುವ ತಮ್ಮ ಸ್ವಗೃಹ `ಆರೋಹ’ದಲ್ಲಿ ನಿಧನ ಹೊಂದಿದರು. ಪತ್ನಿ , ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅವರು ಅಗಲಿದ್ದಾರೆ.

mbd_march9_4
ಎಂ.ಎ. (ರಾಜ್ಯಶಾಸ್ತ್ರ), ಬಿ.ಎಡ್. ಪದವೀಧರಾಗಿದ್ದ ಅವರು ಜೈನ ಹೈಸ್ಕೂಲಿನಲ್ಲಿ ಇಂಗ್ಲೀಷ್, ಸಾಮಾಜಿಕ ಅಧ್ಯಯನ ವಿಷಯಗಳನ್ನು , ಒಂದು ವರ್ಷದ ಪಿಯುಸಿ ಇದ್ದಾಗ ರಾಜ್ಯಶಾಸ್ತ್ರ ವಿಷಯವನ್ನು ಬೋ„ಸುತ್ತಿದ್ದ ಅವರು ಗಂಭೀರ ಪ್ರವೃತ್ತಿಯವರಾಗಿದ್ದು ಶಿಸ್ತಿಗೆ ಹೆಸರಾಗಿದ್ದರು. `ವೀರ ಮಹಾವೀರ’, `ಕಲ್ಲು ಕೊನರಿತು’, `ಜ್ವಾಲಾಮಾಲಿನಿ ಮಹಿಮೆ’ ಮೊದಲಾದ ನಾಟಕಗಳನ್ನು ರಚಿಸಿ, ನಿರ್ದೇಶಿಸಿದ್ದ ರು. ಮಾಜಿ ಕೇಂದ್ರ ಸಚಿವ ಎಂ. ವೀರಪ್ಪ ಮೊೈಲಿ, ಮಾಜಿ ದತ್ತಿ ಸಚಿವ ಕೆ. ಅಮರನಾಥ ಶೆಟ್ಟಿ, ಶಾಸಕ ಕೆ. ಅಭಯಚಂದ್ರ ಮೊದಲಾದ ನಾಯಕರೂ ಸೇರಿದಂತೆ ಗಣ್ಯಸ್ಥಾನಮಾನ ಅಲಂಕರಿಸಿರುವ ಅನೇಕ ಮಂದಿ ಆದಿರಾಜ್ ಅವರ ಶಿಷ್ಯರಾಗಿದ್ದರು. ನಿವೃತ್ತಿಯ ಬಳಿಕ ಅವರು ಜೈನ ಮಠದಲ್ಲಿ ಕೆಲಕಾಲ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿದ್ದರು.

By Suddi9

Leave a Reply

Your email address will not be published. Required fields are marked *