ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ರೋಸ್ಟ್ರುಂ ಸ್ಪೀಕರ್ ಕ್ಲಬ್‍ನ ಆಶ್ರಯದಲ್ಲಿ ಶುಕ್ರವಾರ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮ ಮಿಜಾರಿನಲ್ಲಿರಯವ ಕ್ಯಾಂಪಸ್ಸಿನಲ್ಲಿ ನಡೆಯಿತು.
ನಾಸಾದ ವಿಐಪಿ ಟೂರ್ ಗೈಡ್, ಅಂತಾರಾಷ್ಟ್ರೀಯ ವಾಗ್ಮಿ ಡಾ.ರವಿ ಎನ್. ಮಾರ್ಗಸಹಾಯಂ, ವಿದ್ಯಾರ್ಥಿಗಳಲ್ಲಿ ಸಮರ್ಥ ನಾಯಕತ್ವ ಕುರಿತು ಉಪನ್ಯಾಸ ನೀಡಿದರು. ನಾಸಾ ಸಂಸ್ಥೆ ಕೇವಲ ಅಮೇರಿಕಕ್ಕೆ ಮಾತ್ರ ಸೀಮಿತವಲ್ಲ ಇಡೀ ಪ್ರಪಂಚಕ್ಕೆ ಉಪಯೋಗವಾಗುವ ಸಂಶೋಧನೆಗಳು ಅಲ್ಲಿ ನಡೆಯುತ್ತವೆ. ಭಾರತೀಯ ವಿಜ್ಞಾನಿಗಳು ಕೂಡ ಸೇವೆ ಸಲ್ಲಿಸುತ್ತಿದ್ದಾರೆ. ನಮ್ಮ ದೇಶದಲ್ಲಿ ಮಾನವಸಂಪನ್ಮೂಲ ಹೇರಳವಾಗಿದ್ದು, ಬಾಹ್ಯಕ್ಷೇತ್ರಕ್ಕೆ ನಮ್ಮ ಜ್ಞಾನವನ್ನು ವಿನಿಯೋಗಿಸಬೇಕು.
ವಿದ್ಯಾರ್ಥಿಗಳು ಬಾಹ್ಯಾಕಾಶದ ಕುರಿತು ಆಸಕ್ತಿ ವಹಿಸಿ, ಅಧ್ಯಯನ ಮಾಡಿದರೆ ವಿಫುಲ ಅವಕಾಶಗಳಿವೆ ನಾಸಾ ರೀತಿಯ ಗುಣಮಟ್ಟದ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ನಮ್ಮ ದೇಶದಲ್ಲಿರುವ ಇಸ್ರೋ ಬಾಹ್ಯಾಕಾಶ ಸಂಶೋಧನೆಗಳನ್ನು ನಡೆಸುತ್ತಿವೆ. ದೇಶದಲ್ಲೇ ಇಂತಹ ಸುವಾರ್ಣಾವಕಾಶವಿರುವುದು ನಮ್ಮ ದೇಶದ ವಿದ್ಯಾರ್ಥಿಗಳ ಭಾಗ್ಯ. ವಿದ್ಯಾರ್ಥಿಗಳ ಎಷ್ಟು ಜ್ಞಾನವಂತರಾಗಿದ್ದಾರೆ ಎನ್ನುವುದು ಮೇಲೆ ಅವರ ಚಿಂತನೆಗಳು ಅವಲಂಬಿಸಿದೆ. ಸ್ಪಷ್ಟ ಚಿಂತನೆ, ಸವಾಲುಗಳನ್ನು ಮೀರಿದ ದೃಢ ನಿರ್ಧಾರ, ಕಠಿಣ ಪರಿಶ್ರಮ, ವೈಜಾರಿಕ ದೃಷ್ಟಿಕೋನ, ಗ್ರಹಿಕೆಯಲ್ಲಿ ಸೂಕ್ಷತೆ ವಿದ್ಯಾರ್ಥಿಯನ್ನು ರೂಪಿಸುತ್ತದೆ. ಯಶಸ್ಸಿನ ಬೆನ್ನು ಹಿಡಿಯುವ ಬದಲು ನಮ್ಮ ಚಿಂತನೆ, ಪ್ರಯತ್ನಗಳನ್ನು ಸರಿಯಾದ ರೀತಿಯಲ್ಲಿ ಕೊಂಡೊಯ್ಯುವುದು ಉತ್ತಮ ಎಂದರು.
ನಾಸಾ ವಿಜ್ಞಾನಿ ಡಾ.ಗೋಪಾಲ ಐಯ್ಯಂಗಾರ್, ದುಬೈ ಎಕ್ಸೆಲ್ ಆಡಿಟಿಂಗ್ ಸಂಸ್ಥೆಯ ಲೆಕ್ಕ ಪರಿಶೋಧಕ ದೇವ್ ಕುಮಾರ್, ನ್ಯೂಯಾರ್ಕ್ ಮೆಟ್ರೋ ಸಿಸ್ಟಂನ ನಿವೃತ್ತ ಇಂಜಿನಿಯರ್ ಪರಿಷೋತ್ತಮ್ ಸಿ. ಮುಖ್ಯ ಅತಿಥಿಯಾಗಿದ್ದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ಫೆರ್ನಾಂಡಿಸ್ ಉಪಸ್ಥಿತರಿದ್ದರು. ಶುೃತಿ ಕಾರ್ಯಕ್ರಮ ನಿರೂಪಿಸಿದರು. ತನಿಯಾ ಮನಿಜ್ ಅತಿಥಿಗಳನ್ನು ಪರಿಚಯಿಸಿದರು.

