ಮೂಡುಬಿದರೆ: ವಿದ್ಯಾಗಿರಿಯ ಆಳ್ವಾಸ್ ಕ್ಯಾಂಪಸ್‍ನಲ್ಲಿ ನಡೆದ ಮಂಗಳೂರು ವಿವಿ ಪುರುಷರ ವಿಭಾಗದಲ್ಲಿ ಬಾಲ್‍ಬಾಡ್ಮಿಂಟನ್ ಪ್ರಶಸ್ತಿ ಪಡೆಯುವುದರೊಂದಿಗೆ ಆಳ್ವಾಸ್ ಕಾಲೇಜು ತಂಡ ಸತತ 12 ನೇ ಬಾರಿ ಎಂ.ಕೆ ಅನಂತರರಾಜ್ ಸ್ಮಾರಕ ಪರ್ಯಾಯ ಫಲಕ ಪಡೆದುಕೊಂಡಿದೆ.
ಮಂಗಳೂರು ವಿವಿ ವ್ಯಾಪ್ತಿಯ 14 ತಂಡಗಳ ಭಾಗವಹಿಸಿದ್ದು ಈ ಟೂರ್ನಿಯ ಪೈನಲ್‍ನಲ್ಲಿ ಆಳ್ವಾಸ್ ತಂಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಾಮದಪದವು ತಂಡವನ್ನು 29-6 ಹಾಗೂ 29-4 ನೇರ ಸೆಟ್‍ಗಳಿಂದ ಸೋಲಿಸಿದೆ.
ಆಳ್ವಾಸ್ ಕಾಲೇಜು ತಂಡದ ಗೋಪಾಲ್ ಟೂರ್ನ್‍ಮೆಂಟ್‍ನ ಉತ್ತಮ ಆಟಗಾರರಾಗಿ ಮೂಡಿಬಂದರು. ನಿವೃತ್ತ ಶಿಕ್ಷಕ ಅಂಡಾರು ಗುಣಪಾಲ ಹೆಗ್ಡೆ, ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಉಷಾರಾಣಿ ವಿಜೇತರಿಗೆ ಬಹುಮಾನ ವಿತರಿಸಿದರು.
ಉದ್ಘಾಟನೆ:
ಯುವಜನ ಕ್ರೀಡಾ ಸಚಿವ ಅಭಯಚಂದ್ರ ಜೈನ್ ಪಂದ್ಯಾಟಕ್ಕೆ ಚಾಲನೆ ನೀಡಿದರು.
ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಕಿಶೋರ್‍ಕುಮಾರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಂಗಳೂರು ವಿವಿಯ ಮಾಜಿ ಚಾಂಪಿಯನ್ ಆಟಗಾರ ಯತೀಶ್ ಶೆಟ್ಟಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ, ದೈಹಿಕ ನಿರ್ದೇಶಕ ದಯಾಕರ್, ಪಂದ್ಯಾಟದ ರೆಫ್ರಿ ಶ್ರೀನಿವಾಸ ಮೂರ್ತಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
