ಮೂಡುಬಿದಿರೆ : ಸರಕಾರ ಕ್ರೀಡಾಪಟುಗಳಿಗೆ ಶೇ.2ರಷ್ಟು ಉದ್ಯೋಗ ಮೀಸಲಾತಿ ನೀಡಬೇಕು. ವೆಯಿಟ್ ಲಿಫ್ಟಿಂಗ್ಗೆ ರಾಜ್ಯದಲ್ಲಿ ಕೇವಲ ಮೂರು ಮಂದಿ ಮಾತ್ರ ಕೋಚ್ಗಳಿರುವುದರಿಂದ ಈ ಕ್ರೀಡೆಗೆ ತರಬೇತುದಾರರ ಕೊರತೆಯಲ್ಲಿದೆ ಎಂದು ವೈಯಿಟ್ ಲಿಫ್ಟರ್ಸ್ ಅಸೋಸಿಯೇಷನ್ನ ಕಾರ್ಯದರ್ಶಿ ಚಂದ್ರಹಾಸ ರೈ ಹೇಳಿದರು.
mbd_oct17_5
ಅವರು ಆಳ್ವಾಸ್ ಎಜ್ಯುಕೇಷನ್ ಫೌಂಡೇಶನ್ ವತಿಯಿಂದ ವಿದ್ಯಾಗಿರಿಯ ನುಡಿಸಿರಿ ವೇದಿಕೆಯಲ್ಲಿ ಎರಡು ದಿನಗಳ ಕಾಲ ನಡೆಯುವ ರಾಜ್ಯ ಮಟ್ಟದ ಪುರುಷರ 44ನೇ ಹಾಗೂ 28ನೇ ಮಹಿಳೆಯರ ವೈಯಿಟ್ ಲಿಫ್ಟಿಂಗ್ ಸ್ಪರ್ಧೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರ ವೈಯಿಟ್ ಲಿಫ್ಟರ್ಗಳಿದ್ದು ಸರ್ಕಾರ ಜಿಲ್ಲೆಗೆ ಎರಡು ಕೋಚ್ಗಳನ್ನು ನೇಮಿಸಬೇಕು ಎಂದು ಆಗ್ರಹಿಸಿದರು.

ಅಂತರಾಷ್ಟ್ರೀಯ ವೆಯ್ಟ್ಲಿಫ್ಟರ್ ಆರ್ಥರ್ ಡಿ’ಸೋಜ ಕ್ರೀಡೆಗೆ ಚಾಲನೆ ನೀಡಿ ನಿರಾಶಾದಾಯಕ ಪರಿಸ್ಥಿತಿಯಲ್ಲಿರುವ ವೆಯ್ಟ್ಲಿಫ್ಟಿಂಗ್ ಕ್ರೀಡೆಯನ್ನು ಮುಂದುವರಿಸುವುದೇ ಕಷ್ಟವಾಗಿದೆ. ಕ್ರೀಡೆಯಲ್ಲಿ ಶೀಘ್ರದಲ್ಲಿ ಉನ್ನತ ಶಿಖರಕ್ಕೆ ಏರಬೇಕೆಂಬ ಹಂಬಲದಿಂದ ಕ್ರೀಡಾಪಟುಗಳು ಅಡ್ಡಹಾದಿ ಹಿಡಿಯುತ್ತಿದ್ದಾರೆ. ಹೀಗಾಗಿ ಹೆತ್ತವರು ಕೂಡಾ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿಲ್ಲ. ಈ ಕುರಿತು ಗಂಭೀರ ಚರ್ಚೆ ನಡೆಯಬೇಕಾಗಿದೆ ಎಂದು ಹೇಳಿದರು.

ರಾಜ್ಯ ವೈಯಿಟ್ ಲಿಫ್ಟರ್ಸ್ ಅಸೋಸಿಯೇಷನ್ ಹಾಗೂ ಅವರು ಮಾತನಾಡಿದರು. ಅಂತರಾಷ್ಟ್ರೀಯ ಖ್ಯಾತಿಯ ವೈಯಿಟ್ ಲಿಫ್ಟರ್ ಪುಷ್ಪರಾಜ್ ಹೆಗ್ಡೆ, ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಪ್ರೊ.ಕುರಿಯನ್ ಸ್ವಾಗತಿಸಿದರು. ಪ್ರಮೋದ್ ಕುಮಾರ್ ವಂದಿಸಿದರು. ಪ್ರವೀಣ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.

By Suddi9

Leave a Reply

Your email address will not be published. Required fields are marked *