ಸುದ್ದಿ9ಮಂಗಳೂರು: ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ವಿಧವೆಯರೇ ಲಕ್ಷ್ಮೀಪೂಜೆ ಮಾಡುವ ಮೂಲಕ ವೈದಿಕ ಆಚರಣೆಯನ್ನು ಮುರಿದ ಘಟನೆಗೆ ದೇವಸ್ಥಾನ ಸಾಕ್ಷಿಯಾಯಿತು. ಈ ಹಿಂದೆ ಅರ್ಚಕ ಸ್ಥಾನವನ್ನು ವಹಿಸಿಕೊಂಡಿದ್ದ ದಲಿತ ಮಹಿಳೆಯರು ಇದೀಗ ವಿಧವೆಯರಿಗೆ ಲಕ್ಷ್ಮಿ ಅವಕಾಶ ಕಲ್ಪಿಸುವ ಮೂಲಕ ತಲೆತಲಾಂತರಗಳಿಂದ ಆಚರಿಸಿಕೊಂಡು ಬರುತ್ತಿದ್ದ ಆಚರಣೆಯನ್ನು ಮುರಿಯಲಾಗಿದೆ.
ಕ್ಷೇತ್ರದ ಪ್ರಮುಖರಾದ ಜನಾರ್ದನ ಪೂಜಾರಿ, ಮೇಯರ್ ಮಹಾಬಲ ಮಾರ್ಲ ಉಪಸ್ಥಿತಿಯಲ್ಲಿ ಪತಿಯನ್ನು ಕಳೆದುಕೊಂಡ ಸಾವಿರಾರು ಮಹಿಳೆಯರು ಪೂಜೆ ಸಲ್ಲಿಸಿದರು. ಸಮಾಜದಲ್ಲಿ ಅಗೌರವ ಎನಿಸಿಕೊಂಡ ವಿಧವೆಯರು ಅಗ್ರ ಪಂಕ್ತಿಯ ಪೂಜೆ ನಡೆಸಿ ಬಳಿಕ ಬೆಳ್ಳಿ ರಥವನ್ನು ಎಳೆದರು. ಇದೇ ಸಂದರ್ಭದಲ್ಲಿ ಮಹಿಳೆಯರಿಗೆ ಸೀರೆ, ಕುಂಕುಮ ಸೇರಿದಂತೆ ಅಕ್ಷತೆ, ಬಾಗಿನವನ್ನು ಕ್ಷೇತ್ರದ ವತಿಯಿಂದ ಸಮರ್ಪಿಸಲಾಯಿತು.

