ಮಂಗಳೂರು: ಉದ್ಯಮಿಯೋರ್ವರ ಮನೆಯ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿರುವ ಘಟನೆ ನಗರದ ಹೊರವಲಯದ ಮುಲ್ಕಿಯಲ್ಲಿ ಶನಿವಾರ ರಾತ್ರಿ ನಡೆದಿದೆ.
ಮುಲ್ಕಿ ಬಸ್ ನಿಲ್ದಾಣದ ಎದುರಿನಲ್ಲಿರುವ ಉದ್ಯಮಿ ನಾಗರಾಜ್ ಎಂಬವರ ಮನೆಯ ಮೇಲೆ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಶನಿವಾರ ರಾತ್ರಿ ಸುಮಾರು 9.30 ಕ್ಕೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ನಾಗರಾಜ್ ಅವರ ಮನೆಯ ಗೇಟಿನ ಬಳಿ ಓರ್ವ ದುಷ್ಕರ್ಮಿ ಹೆಲ್ಮೆಟ್ ಧರಿಸಿ ಬಂದು ಮನೆಯ ಬೆಲ್ ಒತ್ತಿದ್ದಾನೆ. ಮನೆಯವರು ಸಂಶಯಾಸ್ಪದದಿಂದ ಬಾಗಿಲು ತೆರೆದಿದ್ದಾಗ. ಕಿಟಿಕಿ ಮೂಲಕ ಎರಡು ಸುತ್ತು ಗುಂಡು ಹಾರಿಸಿದ್ದಾನೆ ಎನ್ನಲಾಗಿದೆ.
ಗುಂಡಿನ ದಾಳಿಯಿಗೆ ಮನೆಯ ಒಳಗಿದ್ದ ಕನ್ನಡಿ ಒಡೆದಿದ್ದು, ಮತ್ತೊಂದು ಗುಂಡು ಮನೆಯ ದೇವರ ಕೋಣೆಗೆ ನುಗ್ಗಿದೆ. ಬಳಿಕ ನಾಗರಾಜ್ ಅವರ ಮನೆಯ ಎದುರು ಪಾರ್ಕ್ ಮಾಡಿದ್ದ ಆಡಿ ಕಾರಿಗೆ ಗುಂಡು ಹಾರಿಸಿದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಎಮದು ತಿಳಿದು ಬಂದಿದೆ.

