ಮಂಗಳೂರು: ಮಂಗಳೂರು ತಾಲೂಕಿನ ಕೊಂಪದವು ಗ್ರಾಮದ “ಶ್ರೀ ಸೋಮನಾಥೇಶ್ವರ ಗುಹಾಲಯ ನೆಲ್ಲಿತೀರ್ಥ” ಎಂಬಲ್ಲಿ ಜ.11ರಿಂದ 16ವರೆಗೆ ವರ್ಷಾವಧಿ ಜಾತ್ರಾ ಮಹೋತ್ಸವ ಮತ್ತು ಮಹಾರಥೋತ್ಸವವು ಜರುಗಲಿದೆ.
ಜ.11ರಂದು ಧ್ವಜಾರೋಹಣ, ಜ.12ರಂದು ವಿಶೇಷ ಹುಣ್ಣಿಮೆ ತೀರ್ಥ ಸ್ಥಾನ, ಜ.13ರಂದು ಹಗಲು ರಥೋತ್ಸವ, ಜ.14ರಂದು ಮಹಾರಥೋತ್ಸವ, ಜ.15ರಂದು ಸಂಪ್ರೋಕ್ಷಣೆ, ಜ.16ರಂದು ವ್ಯಾಘ್ರ ಚಾಮುಂಡಿ ಮತ್ತು ಪರಿವಾರ ದೈವಗಳಿಗೆ ನೇಮೋತ್ಸವ ಜರಗಲಿದೆ ಎಂದು ದೇವಳದ ಪ್ರಕಟನೆ ತಿಳಿಸಿದೆ

