ಮೂಡುಬಿದಿರೆ: ಕಳೆದ ಐದು ದಶಕಗಳಿಂದ ಸರ್ವಧರ್ಮದವರು ಒಟ್ಟು ಸೇರಿ ಆಚರಿಸುತ್ತಿರುವ ಮೂಡುಬಿದಿರೆಯ ಸಾರ್ವಜನಿಕ ಶ್ರೀ ಗಣೇಶೋತ್ಸವವು ಸೆಪ್ಟಂಬರ್ 5ರಿಂದ 9ರವರೆಗೆ ಮೂಡುಬಿದಿರೆ ಸಮಾಜಮಂದಿರದಲ್ಲಿ ನಡೆಯಲಿದೆ. 53ನೇ ವರ್ಷದ ಗಣೇಶೋತ್ಸವವು ಧಾರ್ಮಿಕ, ಸಾಂಸ್ಕøತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ ಎಂದು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಕೆ.ಅಮರನಾಥ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸೆ.5ರಂದು ಬೆಳಿಗ್ಗೆ 10.30ಕ್ಕೆ ಶ್ರೀಗಣೇಶ ವಿಗ್ರಹವನ್ನು ಅಲಂಗಾರು ಬಡಗು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ವೇ.ಮೂ ಈಶ್ವರ ಭಟ್ ಪ್ರತಿಷ್ಠಾಪಿಸಲಿದ್ದಾರೆ. ಮಂಗಳೂರು ಪೊಲೀಸ್ ಆಯುಕ್ತ ಎಂ.ಚಂದ್ರಶೇಖರ್ ಉಪಸ್ಥಿತರಿರುವರು.
ಸೆ.6ರಂದು ಲೋಕಕಲ್ಯಾಣಾರ್ಥವಾಗಿ ಅಥರ್ವ ಶೀರ್ಷ ಗಣಯಾಗ ನಡೆಯಲಿದೆ. ಸೆ.9ರಂದು ಬೆಳಿಗ್ಗೆ 10.30ಕ್ಕೆ ಸಮಾರೋಪ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮವಿದೆ. ಮೂಡುಬಿದಿರೆ ಜೈನ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮುನಿರಾಜ ರೆಂಜಾಳ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಅಂದು ಸಂಜೆ 6 ಗಂಟೆಗೆ ವಿಸರ್ಜನಾ ಪೂಜೆ ನಡೆಯಲಿದ್ದು, ರಾತ್ರಿ ಗಂಟೆಯಿಂದ ಶೋಬಾಯಾತ್ರೆ ನಡೆಯಲಿದೆ. ಬಳಿಕ ಅಲಂಗಾರು ಬಡುಗುಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಾನಾಸ ಗಂಗೋತ್ರಿ ಸರೋವರದಲ್ಲಿ ವಿಗ್ರಹ ವಿಸರ್ಜಬೆ ಮಾಡಲಾಗುವುದು ಎಂದು ತಿಳಿಸಿದರು.
ಸಮಿತಿಯ ಸಂಚಾಲಕ ರಾಜಾರಾಮ್ ನಾಗರಕಟ್ಟೆ, ಕಾರ್ಯದರ್ಶಿ ಗಂಗಾಧರ ಎಂ., ಸಾಂಸ್ಕøತಿಕ ಕಾರ್ಯಕ್ರಮಗಳ ಸಂಚಾಲಕ ಯತಿರಾಜ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿದ್ದರು.

ಸಾಂಸ್ಕøತಿಕ ವೈವಿದ್ಯ:
ಸೆ.5ರಂದು ನಿಸರ್ಗ ಕಲಾವಿದರು ಬೆದ್ರ ತಂಡದಿಂದ ನಮ ಏಪಲಾ ಇಂಚೆನೆ ತುಳುನಾಟಕ, ಸೆ.6ರಂದು ಟ್ವಸ್ಟರ್ ಡ್ಯಾನ್ಸ್ ಅಕಾಡೆಮಿಯಿಂದ ನೃತ್ಯ ವೈವಿಧ್ಯ, ಸೆ.7ರಂದು ವಿನಾಯಕ ಸೇವಾ ಸಮಿತಿ ಪ್ರಾಯೋಜಕತ್ವದಲ್ಲಿ `ಶ್ರೀ ದೇವಿ ಲೀಲಾಮೃತ ಯಕ್ಷಗಾನ, ಸೆ.8ರಂದು ಜೈನ ಪ್ರೌಢಶಾಲೆ ವಿದ್ಯಾರ್ಥಿಗಳಿಂದ ನೃತ್ಯ ವೈವಿದ್ಯ ಕಾರ್ಯಕ್ರಮ ನಡೆಯಲಿದೆ.

By suddi9

Leave a Reply

Your email address will not be published. Required fields are marked *