ಮಾಜಿ ಸೈನಿಕರ ವೇದಿಕೆ ಉದ್ಘಾಟನೆ
ಸುದ್ದಿ9ಮೂಡುಬಿದರೆ : ಕಾರ್ಕಳ, ಮೂಡುಬಿದರೆ, ಮೂಲ್ಕಿ, ಶಿತರ್ಾಡಿ, ವೇಣೂರು, ಸಿದ್ಧಕಟ್ಟೆ ಹಾಗೂ ಸಚ್ಚರೀಪೇಟೆಯ ಪರಿಸರದಲ್ಲಿ ವಾಸವಾಗಿರುವ ಮಾಜಿ ಸೈನಿಕರೆಲ್ಲಾ ಸಂಘಟಿತರಾಗಿ ವೇದಿಕೆಯೊಂದನ್ನು ಮೂಡುಬಿದಿರೆಯಲ್ಲಿ ರಚಿಸಿದ್ದು ಇದರ ಉದ್ಘಾಟನಾ ಸಮಾರಂಭವು ಜ.26ರಂದು ಸಮಾಜ ಮಂದಿರ ಸಭಾಂಗಣದ ಸ್ವರ್ಣ ಮಂದಿರದಲ್ಲಿ ನಡೆಯಲಿದೆ ಎಂದು ಸಂಘದ ಪ್ರಧಾನ ಕಾರ್ಯದಶರ್ಿ ವಿಜಯ ಫೆನರ್ಾಂಡಿಸ್ ತಿಳಿಸಿದರು.
ಅವರು ಮೂಡುಬಿದರೆ ಪ್ರೆಸ್ಕ್ಲಬ್ನಲ್ಲಿ ಬುಧವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಬಗ್ಗೆ ಮಾಹಿತಿ ನೀಡಿದರು. ತಮ್ಮ ಜೀವನದ ಅಮೂಲ್ಯ ಸಮಯವನ್ನು ದೇಶಕ್ಕಾಗಿ ಮುಡಿಪಾಗಿಟ್ಟ ಸೈನಿಕರು ಈಗ ತಮ್ಮ ಸಿಕ್ಕ ಪಿಂಚಣಿಯೊಂದಿಗೆ ತವರೂರಿನ ಹಿತ ಹಾಗೂ ಸ್ವಚ್ಛ ವಾತಾವರಣಕ್ಕೆ ಸ್ಪಂದಿಸುದರ ಜತೆಗೆ ಈ ಸಂಘಟನೆಯ ಮೂಲಕ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸಿ, ಸಮಾಜಸೇವೆಯ ಅರಿವನ್ನು ಪಡೆದು ಅದನ್ನು ಸಕಾರಗೊಳಿಸುವ ನಿಟ್ಟಿನಲ್ಲಿ ಈ ವೇದಿಕೆಯು ಸಂಕಲ್ಪವನ್ನು ಕೈಗೊಂಡಿದೆ.
ಈಗಿನ ಯುವಕರನ್ನು ಶಿಷ್ಟರು, ಬಲಿಷ್ಟರರೂ ಹಾಗೂ ಮೇದಾವಿಗಳೆಂದು ಗುರುತಿಸಲಾಗಿದ್ದು ಅವರಿಗೆ ದೇಶದ ಸಶಸ್ತ್ರ ಸೇನಾಪಡೆಗೆ ಸೇರಲು ಪ್ರೇರೇಪಿಸಿ ಅದಕ್ಕೆ ಬೇಕಾದ ತರಬೇತಿಯನ್ನು ನೀಡುವ ಧೈರ್ಯವೂ ಈ ಸಂಘಟನೆಯದಾಗಿದೆ. ದೇಶಕ್ಕಾಗಿ ಸೇವೆ ಸಲ್ಲಿಸುವ ವೇಳೆಯಲ್ಲಿ ಅಕಸ್ಮಾತಾಗಿ ಬಲಿದಾನವಾದರೆ ಅಂತಹ ಸಂದರ್ಭದಲ್ಲಿ ಅವರ ಪರಿವಾರವನ್ನು ಗುರುತಿಸಿ ಸೂಕ್ತ ಪರಿಹಾರವನ್ನು ಸಮಯಕ್ಕೆ ಸರಿಯಾಗಿ ತಲುಪುವಂತೆ ವ್ಯವಸ್ಥೆಯನ್ನು ಮಾಡುವ ಗುರಿಯನ್ನು ಸಂಘಟನೆಯು ಹೊಂದಿದೆ ಎಂದರು.
ಸಂಘಟನೆಯ ಅಧ್ಯಕ್ಷ ರಾಮಚಂದ್ರ ನಾಯಕ್, ಉಪಾಧ್ಯಕ್ಷ ರಾಮಕೃಷ್ಣ ಜೆ.ಶೆಣೈ, ಖಜಾಂಜಿ ರಮಾನಂದ ರಾವ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
…………..

DSC01704

By suddi9

Leave a Reply

Your email address will not be published. Required fields are marked *