ಸುದ್ದಿ 9 ಕೈಕಂಬ; ಮಾ. 26 ಮಂಗಳೂರು ನಗರ ಉತ್ತರ ವಿಧಾನ ಸಭಾ ಕ್ಷೇತ್ರದ ಗುರುಪುರ ವಲಯದ ಬಿಜೆಪಿ ಬೆಂಬಲಿತ ಜಿಲಾ ್ಲಪಂಚಾಯತ್ ತಾಲೂಕು ಪಂಚಾಯತ್ ಮತ್ತು ಗ್ರಾಮ ಪಂಚಾಯತ್ ಜನಪ್ರತಿನಿಧಿಗಳ ಸಭೆಯು ಕಿನ್ನಿಕಂಬಳ ರಾಧಕೃಷ್ಣ ಭಜನಾ ಮಂದಿರದಲ್ಲಿ ಬುಧವಾರ ನಡೆಯಿತು. ಕಾಂಗ್ರೆಸ್ ಅದಿಕಾರಕ್ಕೆ ಬಂದು ವರ್ಷ ಕಳೆದರು ಅಭಿವೃದ್ಧಿಯ ಕಡೆಗೆ ಗಮನ ಕೊಡದೆ ಇತರ ಪಕ್ಷದವರನ್ನು ಟೀಕಿಸುವುದರಲ್ಲೆ ಕಾಲಹರಣ ಮಾಡುತ್ತದೆ ಎಂದು ಮಂಗಳೂರು ಉತ್ತರ ವಿಧಾನ ಸಭಾ ಮಾಜಿ ಶಾಸಕ ಕೃಷ್ಣ ಜೆ ಪಾಲೆಮಾರ್ ಹೇಳಿದರು.
ಮತದಾರರಿಗೆ ಸುಳ್ಳು ಆಶ್ವಾಸನೆಯನ್ನು ನೀಡಿ ಜನರಿಗೆ ವಂಚನೆ ಮಾಡಲಾಗಿದೆ ಕಾಂಗ್ರೆಸ್ ಅಪಪ್ರಚಾರದಿಂದ ಮತ ಪಡೆಯಲು ಯತ್ನಿಸುತ್ತದೆ. ಅದಕ್ಕೆ ನಾವು ಅವಕಾಶ ಕೊಡದೆ ಬಿಜೆಪಿ ಅಭ್ಯಥರ್ಿ ನಳಿನ್ಕುಮಾರ್ ಕಟೀಲ್ ಅವರನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮ ಮೇಲಿದೆ. ನರೇಂದ್ರ ಮೋದಿ ಅವರು ಭಾರತದ ಪ್ರಧಾನಿ ಆಗುವ ಕಾಲ ಕೂಡಿ ಬಂದಿದೆ ಎಂದರು. ನಮ್ಮ ಕಾರ್ಯಕರ್ತರು ಎಲ್ಲಾ ಮನೆಮನೆಗೆ ತರಳಿ ಮತದರರನ್ನು ಸಂಪಕರ್ಿಸಿ ನಾವು ಮಾಡಿದ ಆಭಿವೃದ್ಧಿಯ ಬಗ್ಗೆ ಮನವರಿಕೆ ಮಾಡಿಕೊಡಬೇಕು ಎಂದರು. ಅವರು ಕಿನ್ನಿಕಂಬಳ ರಾಧಕೃಷ್ಣ ಭಜನಾ ಮಂದಿರದಲ್ಲಿ ಜನಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದರು.. ಸಭೆಯ ಅಧ್ಯಕ್ಷತೆಯನ್ನು ಉತ್ತರ ಮಂಡಲ ಅಧ್ಯಕ್ಷ ರಮೇಶ್ ಎಸ್ ವಹಿಸಿದ್ದರು. ಮಾಜಿ ಶಾಸಕ ಕೃಷ್ಣ ಜೆ ಪಾಲೆಮಾರ್ ಜಿಲ್ಲಾ ಪಂಚಾಯತ್ ಸದಸ್ಯ ಜನಾರ್ಧನ ಗೌಡ, ರಾಜೇಶ್ಕೊಟ್ಟಾರಿ, ಬಾಸ್ಕರ ಸಾಲಿಯಾನ್,ರುಕ್ಮಯ ನಾಯಕ್, ರೂಪೇಶ್ ಅಧ್ಯಪಾಡಿ ಮತ್ತಿತರರು ಭಾಗವಹಿಸಿದ್ದರು.



