ಬಂಟ್ವಾಳ: ವಿಜ್ಞಾನ ಕ್ಷೇತ್ರದಲ್ಲಿ ಹೊಸತನದ ಆಲೋಚನೆ ಹಾಗೂ ಸೃಜನಶೀಲ ಪ್ರಯತ್ನದ ಮೂಲಕ ಬಿ.ಸಿ.ರೋಡಿನ ಸಂಚಯಗಿರಿ ನಿವಾಸಿ  ಕೃಷ್ಣ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ಇವರು ರಚಿಸಿದ ‘ಬಾರ್ಡರ್ ಸುರಕ್ಷಾ ಕವಚ್’ ಎಂಬ ವಿಜ್ಞಾನ ಮಾದರಿಗೆ ರಾಷ್ಟ್ರೀಯ ಮನ್ನಣೆ ದೊರೆತಿದ್ದು, ಭಾರತದ 7ನೇ ಯುವ ವಿಜ್ಞಾನಿಯಾಗಿ ಆಯ್ಕೆಯಾಗಿದ್ದಾರೆ.

ಬಿ.ಸಿ.ರೋಡಿನ ಸಂಚಯಗಿರಿಯ ಸತೀಶ್ ರೇವತಿ ಬಂಗೇರ ಮತ್ತು ಜ್ಯೋತಿ ಎಂ. ದಂಪತಿಯ ಪುತ್ರನಾಗಿರುವ ಕೃಷ್ಣ, ಮೊಡಂಕಾಪು ಕಾರ್ಮೆಲ್ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ.  ವಿಜ್ಞಾನ ಮಾದರಿಗೆ ಕಾಲೇಜಿನ ಉಪನ್ಯಾಸಕರಾದ ವಿವೇಕ್ ಪೈ ಮತ್ತು ಸುಚಿತ್ ಪಿ.ಯು. ಅವರ ಮಾರ್ಗದರ್ಶನ ನೀಡಿದ್ದಾರೆ.

ವಿದ್ಯಾರ್ಥಿ ದೆಸೆಯಲ್ಲೇ ವಿಜ್ಞಾನ ಕ್ಷೇತ್ರದಲ್ಲಿ ವಿಶಿಷ್ಟ ಪ್ರಯತ್ನದ ಮೂಲಕ ರಾಷ್ಟ್ರಮಟ್ಟದ ಮನ್ನಣೆ ಗಳಿಸಿರುವ ಕೃಷ್ಣ ಅವರ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಉಪನ್ಯಾಸಕ ವೃಂದ ಹಾಗೂ ಪೋಷಕರು,ಸ್ಥಳೀಯ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ. 

By Suddi9