ಬಂಟ್ವಾಳ: ಸಾಹಿತ್ಯವು ಒಂದು ವ್ಯವಸ್ಥಿತವಾದ ಉನ್ನತ ಯೋಚನೆಗಳ ಸರಣಿಯಾಗಿದ್ದು ಇವನ್ನು ದಾಖಲಿಸಿಕೊಡುವ ಪುಸ್ತಕಗಳು ಎಲ್ಲ ಕಾಲದ ನೆನಪುಗಳನ್ನು ನಮಗೆ ಮಾಡಿಕೊಡುತ್ತವೆ. ವಿದ್ಯಾರ್ಥಿಗಳು ಶ್ರೇಷ್ಠ ಚಿಂತಕರ ಇಂತಹ ಪುಸ್ತಕಗಳನ್ನು ಓದಿ ಜೀವನದ ವಿಭಿನ್ನ ದೃಷ್ಟಿಕೋನಗಳನ್ನು ಬೆಳೆಸಿಕೊಳ್ಳಬೇಕು ಎಂದು ಬಿ.ಮೂಡ ಸ. ಪ. ಪೂ. ಕಾಲೇಜಿನ ಪ್ರಾಚಾರ್ಯ ಯೂಸುಫ್ ವಿಟ್ಲ ಅಭಿಪ್ರಾಯಪಟ್ಟರು.

ಅವರು ಕಾಲೇಜಿನ ಸಭಾಂಗಣದಲ್ಲಿ ದ. ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನರಿಕೊಂಬು ಗ್ರಾಮದ ಎರಕಳ ಕೃಷ್ಣ ಸೋಮಾಯಾಜಿ ಸ್ಮರಣಾರ್ಥ ಅವರ ಮಕ್ಕಳು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಿರುವ ದತ್ತಿನಿಧಿ ವತಿಯಿಂದ ನಡೆದ ಉಪನ್ಯಾಸವನ್ನು ರೋಟರಿಕ್ಲಬ್ ನ ಜಿಲ್ಲಾ ಮಾಜಿ ಗವರ್ನರ್ ಎನ್ ಪ್ರಕಾಶ್ ಕಾರಂತ್ ನಡೆಸಿಕೊಟ್ಟರು.
ಬಟ್ಟೆ ವ್ಯಾಪಾರಿಯಾಗಿ ಬದುಕು ಆರಂಭಿಸಿದ್ದ ಕೃಷ್ಣ ಸೋಮಯಾಜಿ ಯವರು ಕೃಷಿ ಹಾಗೂ ಧಾರ್ಮಿಕ ಹಾಗು ಶೈಕ್ಷಣಿಕ ಕ್ಷೇತ್ರಗಳಲ್ಲಿ ಮಾಡಿರುವ ಅನನ್ಯ ಸೇವೆಗಳನ್ನು ಅವರು ಸ್ಮರಿಸಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿತ್ತಿನ ಅಧ್ಯಕ್ಷ ಡಾ. ಎಂ. ಪಿ. ಶ್ರೀನಾಥ್ ವಹಿಸಿದ್ದರು. ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಶ್ವನಾಥ್ ಬಂಟ್ವಾಳ್, ಬಂಟ್ವಾಳ ರೈತರ ಸಲಹಾ ಸಮಿತಿಯ ಅಧ್ಯಕ್ಷ ಅಬೂಬಕ್ಕರ್ ಅಮ್ಮುಂಜೆ ಉಪಸ್ಥಿತರಿದ್ದರು. ಕಾಲೇಜಿನ ಉಪನ್ಯಾಸಕ ಇರ್ಷಾದ್ ಸ್ವಾಗತಿಸಿದರು. ಆಂಗ್ಲಭಾಷಾ ಉಪನ್ಯಾಸಕ ದಾಮೋದರ ರಾಮಕುಂಜ ನಿರೂಪಿಸಿದರು. ಕನ್ನಡ ಉಪನ್ಯಾಕಿ ಪ್ರತಿಭಾ ವಂದಿಸಿದರು.
