ಬಂಟ್ವಾಳ : ಹಿಂದೂ ಜಾಗರಣ ವೇದಿಕೆಯ ಮಂಗಳೂರು ಗ್ರಾಮಾಂತರ ಜಿಲ್ಲಾ ಸಂಯೋಜಕ ನರಸಿಂಹ ಮಾಣಿ ಅವರಿಗೆ ಬೀದರ್ ಜಿಲ್ಲೆಯ ಹುಲಸೂರು ಪೊಲೀಸ್ ಠಾಣಾ ವ್ಯಾಪ್ತಿಗೆ ಗಡಿಪಾರು ಆದೇಶ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಜಾಗೂ ಹಿ.ಜಾ.ವೇ.ಪ್ರಾಂತ ಕಾರ್ಯಕಾರಿಣಿ ಸದಸ್ಯ ಶ್ರೀಕಾಂತ್ ಶೆಟ್ಟಿ ಅವರು ಮಂಗಳವಾರ ನರಸಿಂಹ ಮಾಣಿ ಮನೆಗೆ ಭೇಟಿ ನೀಡಿದರು.

ನರಸಿಂಹಮಾಣಿ ಅವರು ಗಡಿಪಾರು ಆದೇಶಕ್ಕೆ ಒಳಗಾಗಿರುವುದರಿಂದ ಕುಟುಂಬದವರು ಎದುರಿಸುತ್ತಿರುವ ಮಾನಸಿಕ ನೋವು ಮತ್ತು ಆತಂಕವನ್ನು ಆಲಿಸಿದ ಅವರು ಶಾಸಕ ರಾಜೇಶ್ ನಾಯ್ಕ್ ಹಾಗೂ ಹಿ.ಜಾ.ವೇ.ಮುಖಂಡ ಶ್ರೀಕಾಂತ್ ಶೆಟ್ಟಿ ಅವರು ಹಿಂದು ಸಮಾಜ ಯಾವಾಗಲೂ ನಿಮ್ಮ ಜೊತೆಯಿದೆ, ಧೃತಿಗೆಡದಂತೆ ಧೈರ್ಯ ತುಂಬಿದರು.
ಹಿಂದೂ ಕಾರ್ಯಕರ್ತರು ಹಾಗೂ ಹಿಂದೂಪರ ಸಂಘಟನೆಗಳ ನಾಯಕರನ್ನು ನಿರಂತರವಾಗಿ ಇಂತಹ ಕ್ರಮಗಳ ಮೂಲಕ ಗುರಿಯಾಗಿಸಿಕೊಂಡು ಪೊಲೀಸ್ ಇಲಾಖೆ ಕೈಗೊಳ್ಳುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಈ ಸಂದರ್ಭ ಹಿಂ. ಜಾ. ವೇ.ಯ ಪ್ರಾಂತ ಕಾರ್ಯಕಾರಣಿ ಸದಸ್ಯರಾದ ಪ್ರಶಾಂತ್ ಕೆಂಪುಗುಡ್ಡೆ, ಬಿಜೆಪಿ ಬಂಟ್ವಾಳ ಮಂಡಲದ ಪ್ರ.ಕಾರ್ಯದರ್ಶಿ ಸುದರ್ಶನ್ ಬಜ, ದಿನೇಶ್ ಪಂಜಿಗ, ಪವನ್, ಮನೋಜ್ ಮತ್ತಿತರರು ಉಪಸ್ಥಿತರಿದ್ದರು.
