ಬಂಟ್ವಾಳ: ಇಲ್ಲಿಯ ತಾಲೂಕಿನಲ್ಲಿ ಮತದಾರರ ಪಟ್ಟಿಯ ಸಮಗ್ರ ಪರಿಶೀಲನೆ ಕಾರ್ಯಕ್ರಮಕ್ಕೆ ಮಾಜಿ ಕೇಂದ್ರ ಸಚಿವರಾದ ಬಿ.ಜನಾರ್ಧನ ಪೂಜಾರಿ ಅವರ ನಿವಾಸದಲ್ಲಿಮಂಗಳವಾರ ಚಾಲನೆ ನೀಡಲಾಯಿತು.

ಬಂಟ್ವಾಳ ವಿಧಾನಸಭಾ ಕ್ಷೇತ್ರದ ಭಾಗ ಸಂಖ್ಯೆ 130 ರಲ್ಲಿಯ ಬಿ.ಮೂಡ ಗ್ರಾಮದ ಬಸ್ತಿಪಡ್ಪು ಚೆನ್ನಮ್ಮ ಕುಟೀರ ನಿವಾಸದಲ್ಲಿ ವಾಸ್ತವ್ಯವಿರುವ ಕೇಂದ್ರದ ಮಾಜಿ ಸಚಿವ ಬಿ.ಜನಾರ್ಧನ ಪೂಜಾರಿ ಅವರ ನಿವಾಸದಲ್ಲಿ ಮೊದಲನೇ ಎನಿಮೇಷನ್ ಫಾರ್ಮ್ ಅನ್ನು ವಿತರಿಸಲಾಯಿತು.
ಈ ಸಮೀಕ್ಷೆ ಯ ಬಗ್ಗೆ ಜನಾರ್ದನ ಪೂಜಾರಿಯವರು ಮೆಚ್ಚುಗೆ ವ್ಯಕ್ತಪಡಿಸಿದರು. ಬಂಟ್ವಾಳ ತಹಶೀಲ್ದಾರರಾದ ಮಂಜುನಾಥ್, ಉಪತಹಸೀಲ್ದಾರ್ ನವೀನ್ ಕುಮಾರ್ ಬೆಂಜನಪದವು, ಬಿ ಎಲ್ ಎ ಸುನೀಲ್ ಕುಮಾರ್ ಭಂಡಾರಿಬೆಟ್ಟು , ಮೇಲ್ವಿಚಾರಕರಾದ ಗ್ರಾಮ ಆಡಳಿತ ಅಧಿಕಾರಿ ಯಶ್ವಿತಾ,
ಮತಗಟ್ಟೆ ಅಧಿಕಾರಿಯವರಾದ ದಾಮೋದರ ಪಡಿಯಾರ್ , ಕಚೇರಿ ಸಿಬ್ಬಂದಿಯವರಾದ ಸದಾಶಿವ ಕೈಕಂಬ, ಅಕ್ಷತ್ ವಿಟ್ಲ ಉಪಸ್ಥಿತರಿದ್ದರು.
