ಬಂಟ್ವಾಳ :ತಾಲೂಕಿನ ಪಾಂಡವರಕಲ್ಲು ದ.ಕ. ಜಿಲ್ಲಾ ಪಂಚಾಯತ್ ಉನ್ನತೀಕರಿಸಿದ ಹಿರಿಯ ಪ್ರಾರ್ಥಮಿಕ ಶಾಲೆಗೆ ಸಾಮಾಜಿಕ ಕಾರ್ಯಕರ್ತ ಸುಧಾಕರ್ ಶೆಣೈ ಖಂಡಿಗ ಅವರು ಎಂಟು ಫ್ಯಾನ್ ಗಳನ್ನು ಕೊಡುಗೆಯಾಗಿ ಶುಕ್ರವಾರ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಅಗ್ನೆಸ್ ಪ್ರಮಿಲಾ ಲೋಬೊ, ಎಸ್ ಡಿಎಂಸಿ ಅಧ್ಯಕ್ಷ ದಿನೇಶ್ ಜೇಕ್ಯಾರ್, ಸದಸ್ಯರಾದ ಮಾಧವ ಪಟ್ರಾಡಿ, ಲತೀಫ್, ಬಾಬು ಪೂಜಾರಿ ನಿರಾಡಿ, ಹನೀಫ್ ಕೆದಿಲೆ, ಫಾರೂಕ್ ನೀರಾಡಿ, ಪದ್ಮನಾಭ, ನಮಿತಾ ಮತ್ತಿತರರು ಹಾಜರಿದ್ದರು
