ಬಂಟ್ವಾಳ:ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ಪ್ರದೇಶಾಭಿವೃಧಿ ನಿಧಿ 5 ಲಕ್ಷ ರೂ.ವೆಚ್ಚದಲ್ಲಿ ಬಿಜೆಪಿ ಮಂಗಳೂರು ಮಂಡಲದ ಪುದು ಮಹಾ ಶಕ್ತಿ ಕೇಂದ್ರಕ್ಕೊಳಪಟ್ಟ ತುಂಬೆ ಗ್ರಾಮದ ವಳವೂರ್ ಮಿತ್ತಕರೆ ದಿ.ಹರಿನಾಥ ಭಂಡಾರಿ ರಸ್ತೆಯನ್ನು ಕಾಂಕ್ರೀಟೀಕರಣಗೊಳಿಸಿ ಅಭಿವೃದ್ಧಿ ಪಡಿಸುವ ಕಾಮಗಾರಿಗೆ ಭಾನುವಾರ ಗುದ್ದಲಿಪೂಜೆ ನೆರವೇರಿಸಲಾಯಿತು.
ಶೇಖರ್ ಪೂಜಾರಿ ವಳವೂರ್ ಅವರು ಗುದ್ದಲಿ ಪೂಜೆಯನ್ನು ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು

ಈ ಸಂದರ್ಭದಲ್ಲಿ ಬಿಜೆಪಿ ಮಂಗಳೂರು ಮಂಡಲದ ಉಪಾಧ್ಯಕ್ಷ ಮನೋಜ್ ಆಚಾರ್ಯ ನಾಣ್ಯ ಆವರು ಮಾತನಾಡಿ ಮುಂದಿನ ದಿನಗಳಲ್ಲಿ ತುಂಬೆ ಗ್ರಾಮಕ್ಕೆ ಸಂಸದರ ನಿಧಿಯಿಂದ ಇನ್ನಷ್ಟು ಅನುದಾನವನ್ನು ಪಡೆದುಕೊಂಡು ತುಂಬೆ ಗ್ರಾಮವನ್ನು ಅಭಿವೃದ್ದಿಪಡಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದರು.
ಈ ಸಂದರ್ಭ ಮಂಗಳೂರು ಮಂಡಲದ ಹಿಂದುಳಿದ ಮೋರ್ಚಾದ ಅಧ್ಯಕ್ಷರಾದ ಗಣೇಶ್ ಸುವರ್ಣ ತುಂಬೆ, ಪುದು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸುಕೇಶ್ ಶೆಟ್ಟಿ ತೇವು, ಪ್ರಧಾನ ಕಾರ್ಯದರ್ಶಿ ರೂಪೇಶ್ ಜ್ಯೋತಿಗುಡ್ಡೆ, ಮಾಜಿ ಪಂಚಾಯತ್ ಸದಸ್ಯರಾದ ಕಿಶೋರ್ ರಾಮಲಕಟ್ಟೆ, ಸಂಜೀವ ಪೂಜಾರಿ ರಾಮಲಕಟ್ಟೆ, ಮನೋಜ್ ವಳವೂರ್, ಹಿರಿಯರಾದ ಸಂಜೀವ ಪೂಜಾರಿ,ಮಾಧವ ವಳವೂರ್, ಜಯ. ಆರ್. ಎಸ್. ರಾಮಲಕಟ್ಟೆಪೂವಪ್ಪ ವಳವೂರ್, ಮನೋಹರ್ ಪುಡಿಕಲೈಕೋಡಿ, ಅಜಿತ್ ಉಮನಗುಡ್ಡೆ ಮತ್ತಿತರರು ಉಪಸ್ಥಿತರಿದ್ದರು.
ಮನೋಹರ್ ಪರ್ಲಕ್ಕೆ ಸ್ವಾಗತಿಸಿ,ವಂದಿಸಿದರು.ಈ ಅನುದಾನ ಮಂಜೂರಾತಿ ಸಿಗುವಲ್ಲಿ
ಮಂಗಳೂರು ಮಂಡಲದ ಅಧ್ಯಕ್ಷರಾದ ಜಗದೀಶ್ ಆಳ್ವ ಕುವೆತಬೈಲ್ ಸಹಕರಿಸಿದರು
