ಬಂಟ್ವಾಳ : ಬಿ.ಮೂಡ ಗ್ರಾಮದ ಪಲ್ಲಮಜಲಿನ ಕುವಡ್ಕ ಎಂಬಲ್ಲಿ ಕೆಲ ವರ್ಷಗಳಿಂದ ನಡೆಯುತ್ತಿರುವ ಕಪ್ಪು ಕಲ್ಲಿನ ಅಕ್ರಮ ಗಣಿಗಾರಿಕೆ ಸ್ಥಗಿತಗೊಳಿಸುವಂತೆ ಗ್ರಾಮಸ್ಥರು ಮಂಗಳವಾರ ಬಂಟ್ವಾಳ ತಹಶಿಲ್ದಾರರ ಮೂಲಕ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದರು.

ಈಅಕ್ರಮ ಗಣಿಗಾರಿಕೆಗೆ ತೀವ್ರವಾದ ಸ್ಫೋಟಕಗಳನ್ನು ಬಳಸುವುದರಿಂದ ಮನೆಗಳು ಕಂಪನಗೊಳ್ಳುತ್ತಿದ್ದಲ್ಲದೆ ರಸ್ತೆಗಳಿಗೂ ಹಾನಿಯಾಗಿದೆ ಎಂದು ಸ್ಥಳೀಯ ನಾಗರಿಕರು ಬಂಟ್ವಾಳ ತಹಸೀಲ್ದಾರ್ ಅರ್ಚನಾ ಭಟ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿ ಗಮನಸೆಳೆದರು.
ಈಗಾಗಲೇ ಈ ಕುರಿತು ಸ್ಥಳ ಪರಿಶೀಲನೆ ನಡೆಸಲು ಸೂಚಿಸಲಾಗಿದ್ದು, ಗಣಿ ಇಲಾಖೆಗೂ ಮಾಹಿತಿ ನೀಡಲಾಗಿದೆ. ಸಮಸ್ಯೆಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಮನವಿ ಸ್ವೀಕರಿಸಿದ ತಹಸೀಲ್ದಾರ್ ತಿಳಿಸಿದರು.
ಈ ಸಂದರ್ಭದಲ್ಲಿ ರಫೀಕ್ ಪಲ್ಲಮಜಲು, ಚಂದ್ರಹಾಸ ಕಲ್ಲಗುಡ್ಡೆ, ಹರೀಶ್ ಕಲ್ಲಗುಡ್ಡೆ, ಹರ್ಷಿತ್ ಪಲ್ಲಮಜಲು, ಸಾದಿಕ್ ಪಲ್ಲಮಜಲು, ಉಮಾವತಿ ಬೆದ್ರಗುಡ್ಡೆ ಮೊದಲಾದವರಿದ್ದರು.
