ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪೊಳಲಿ ಆಸರೆ ಸೇವಾ ಫೌಂಡೇಶನ್ ಪುಂಚಮೆ ವತಿಯಿಂದ ಜು.೩೧ರಂದು ಭಾನುವಾರ ಪ್ರತಿಭಾ ಪುರಸ್ಕಾರ ಹಾಗೂ ಸಸಿ ವಿತರಣೆ ನಡೆಯಿತು.


ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ೫೫೦ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.

ಅಧ್ಯಕ್ಷತೆಯನ್ನು ಗಣೇಶ್ ಕಲ್ಕುಟ ವಹಿಸಿದ್ದರು. ಮುಖ್ಯ ಅಥಿತಿಯಾಗಿ ಬೆಳ್ಳೂರು ಬಂಟರ ಸಂಘದ ಅಧ್ಯಕ್ಷ ಕೆ. ಜನಾರ್ಧನ ಶೆಟ್ಟಿ ವಹಿಸಿದ್ದರು. ಆಸರೆ ಸೇವಾ ಪೌಂಡೇಶನ್ ನ ರುವಾರಿ ಕರಿಯಂಗಳ ಗ್ರಾ.ಪಂ ಅಧ್ಯಕ್ಷ ಚಂದ್ರಹಾಸ್ ಪಲ್ಲಿಪಾಡಿ ಹಾಗೂ ಉಪಾಧ್ಯಕ್ಷೆ ವೀಣಾ ಆಚಾರ್ಯ, ಬಶೀರ್ ಬಡಕಬೈಲ್, ರಾಜು ಕೋಟ್ಯಾನ್, ರೋಶನ್ ಪುಂಚಮೆ, ಆಸರೆ ಸೇವಾ ಫೌಂಡೇಶನ್ ಇದರ ಸದಸ್ಯರು ಉಪಸ್ಥಿತರಿದ್ದರು. ಬಶೀರ್ ಬಡಕಬೈಲ್ ಸ್ವಾಗತಿಸಿದರು. ಲಕ್ಷ್ಮೀಶ್ ಶೆಟ್ಟಿ ವಂದಿಸಿದರು.



