ಬಂಟ್ವಾಳ: ತಾಲ್ಲೂಕಿನ ನಾವೂರು ಗ್ರಾಮದ ಕೂಡಿಬೈಲು ಗದ್ದೆಯಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಭಾನುವಾರ ಆರಂಭಗೊಂಡ ೧೧ನೇ ವರ್ಷದ ಮೂಡೂರು-ಪಡೂರು ಜೋಡುಕರೆ ಬಯಲು ಕಂಬಳಕ್ಕೆ ಸೋಲೂರು ಕರ್ನಾಟಕ ಆರ್ಯ ಈಡಿಗ ಮಹಾ ಸಂಸ್ಥಾನ ಪೀಠಾಧಿಪತಿ ವಿಖ್ಯಾತಾನಂದ ಸ್ವಾಮೀಜಿ ಮತ್ತು ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿ ಚಾಲನೆ ನೀಡಿದರು. ಸಮಿತಿ ಅಧ್ಯಕ್ಷ ಪಿಯೂಸ್ ಎಲ್.ರಾಡ್ರಿಗಸ್ ಮತ್ತಿತರರು ಇದ್ದಾರೆ.
ಕರಾವಳಿ ರೈತರ ಜಾನಪದ ಕ್ರೀಡೆ ಕಂಬಳ ಜಿಲ್ಲೆಯ ಜನರಲ್ಲಿ ಸೌಹರ್ಧತೆಗೆ ಒತ್ತು ನೀಡಲು ಪ್ರೇರಣೆಯಾಗಿದೆ ಎಂದು ಸೋಲೂರು ಕರ್ನಾಟಕ ಆರ್ಯ ಈಡಿಗ ಮಹಾ ಸಂಸ್ಥಾನ ಪೀಠಾಧಿಪತಿ ವಿಖ್ಯಾತಾನಂದ ಸ್ವಾಮೀಜಿ ಹೇಳಿದ್ದಾರೆ.
ಇಲ್ಲಿನ ನಾವೂರು ಗ್ರಾಮದ ಕೂಡಿಬೈಲು ಗದ್ದೆಯಲ್ಲಿ ಪ್ರಸಕ್ತ ಋತುವಿನ ಕಡೇ ಕಂಬಳ ೧೧ ನೇ ವರ್ಷದ ‘ಮೂಡೂರು-ಪಡೂರು’ ಜೋಡುಕರೆ ‘ಬಂಟ್ವಾಳ ಕಂಬಳ’ಕ್ಕೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.
ರಾಜಾಶ್ರಯದಿಂದ ತುಳುನಾಡಿನ ರೈತರ ಜಾನಪದ ಕ್ರೀಡೆಯಾಗಿ ಬೆಳೆದು ಬಂದಿರುವ ಕಂಬಳ ಕೂಟವು ಭಾವೈಕ್ಯತೆಗೆ ಪೂರಕವಾಗಿ ಬೆಳೆದು ಬಂದಿದೆ ಎಂದು ಮಾಣಿಲ ಶ್ರೀಧಾಮ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಅಲ್ಲಿಪಾದೆ ಚರ್ಚಿನ ಧರ್ಮಗುರು ಫೆಡ್ರಿಕ್ ಮೊಂತೆರೋ ಶುಭ ಹಾರೈಸಿದರು. ಕಂಬಳ ಸಮಿತಿ ಗೌರವಾಧ್ಯಕ್ಷ, ಮಾಜಿ ಸಚಿವ ಬಿ.ರಮಾನಾಥ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಡಿಮೆ ಅವಧಿಯಲ್ಲಿ ಯಶಸ್ವಿ ಕಂಬಳ ನಡೆಸಲು ಕಂಬಳಾಸಕ್ತರ ಸಹಕಾರ ಸಿಕ್ಕಿದೆ ಎಂದರು.
ಸಮಿತಿ ಸಂಚಾಲಕ ಬಿ.ಪದ್ಮಶೇಖರ್ ಜೈನ್, ಕಾರ್ಯಾಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಉಪಾಧ್ಯಕ್ಷರಾದ ಅವಿಲ್ ಮಿನೇಜಸ್, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಸುದರ್ಶನ ಜೈನ್, ಕೆ. ಮಾಯಿಲಪ್ಪ ಸಾಲ್ಯಾನ್, ಕೋಶಾಧಿಕಾರಿ ಫಿಲಿಪ್ ಫ್ರಾಂಕ್, ನಾವೂರ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಮೇಶ ಕುಲಾಲ್, ಉಪಾಧ್ಯಕ್ಷೆ ಲವೀನ ವಿಲ್ಮಾ ಮೊರಾಸ್, ನಿವೃತ್ತ ತಹಶೀಲ್ದಾರ್ ಕೆ.ಮೋಹನ ರಾವ್, ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್, ಉಪಾಧ್ಯಕ್ಷೆ ಜೆಸಿಂತಾ ಡಿಸೋಜ, ಹಿರಿಯ ಪತ್ರಕರ್ತ ವಾಲ್ಟರ್ ನಂದಳಿಕೆ, ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಶಾಂತ ಪುಂಜಾಲಕಟ್ಟೆ ಪ್ರಮುಖರಾದ ಕೆ.ಪದ್ಮನಾಭ ರೈ, ಸಂಜೀವ ಪೂಜಾರಿ ಮೆಲ್ಕಾರ್, ಜಗನ್ನಾಥ ಚೌಟ ಬದಿಗುಡ್ಡೆ, ರಾಜೇಶ್ ರಾಡ್ರಿಗಸ್, ಸಂಜೀವ ಪೂಜಾರಿ ಬಿ.ಸಿ.ರೋಡು, ಅಬ್ಬಾಸ್ ಆಲಿ, ಶಬೀರ್ ಸಿದ್ಧಕಟ್ಟೆ, ಡೆನ್ಜಿಲ್ ನೊರೋನ್ಹ ಮತ್ತಿತರರು ಇದ್ದರು.
ಸಮಿತಿ ಅಧ್ಯಕ್ಷ, ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಸದಸ್ಯ ಪಿಯೂಸ್ ಎಲ್.ರಾಡ್ರಿಗಸ್ ಸ್ವಾಗತಿಸಿ, ವಂದಿಸಿದರು. ಬಾಲಕೃಷ್ಣ ಆಳ್ವ ಕೊಡಾಜೆ ಮತ್ತು ರಾಜೀವ ಕಕ್ಯಪದವು ಕಾರ್ಯಕ್ರಮ ನಿರೂಪಿಸಿದರು.
ಗಣ್ಯರ ಭೇಟಿ:
ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ವಿಧಾನಪರಿಷತ್ ಸದಸ್ಯ ಕೆ.ಹರೀಶ ಕುಮಾರ್, ಮಾಜಿ ಶಾಸಕ ಜೆ.ಆರ್.ಲೋಬೋ, ಮಾಜಿ ಮೇಯರ್ ಶಶಿಧರ ಹೆಗ್ಡೆ, ಸುಬ್ರಹ್ಮಣ್ಯ ಕ್ಷೇತ್ರದ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ರಾಜ್ಯ ಬಸ್ ಮಾಲೀಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಧರಣೇಂದ್ರ ಕುಮಾರ್, ಎಂ.ಎಸ್.ಮಹಮ್ಮದ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ, ಜಿಲ್ಲಾ ಯುವ ಕಾಂಗ್ರೆಸ್ ಲುಕ್ಮಾನ್ ಬಂಟ್ವಾಳ್, ಪ್ರಧಾನ ತೀರ್ಪುಗಾರ ಕೆ.ಗುಣಪಾಲ ಕಡಂಬ, ಮುಖ್ಯ ತೀರ್ಪುಗಾರ ಎಂ.ರಾಜೀವ ಶೆಟ್ಟಿ, ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ರೋಹಿತ್ ಹೆಗ್ಡೆ ಎರ್ಮಾಳ್, ಬಾರಾಡಿಬೀಡು ಕಂಬಳ ಸಮಿತಿ ಅಧ್ಯಕ್ಷ ಡಾ.ಜೀವಂಧರ ಬಲ್ಲಾಳ್, ಉಪ್ಪಿನಂಗಡಿ ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ರೈ, ಪ್ರಮುಖರಾದ ಭಾಸ್ಕರ ಕೋಟ್ಯಾನ್, ಲೋಲಾಕ್ಷ ಕರ್ಕೇರ, ಪ್ರಕಾಶ್ ಕುಮಾರ್ ಜೈನ್ ಪೀರ್ದಬೆಟ್ಟು, ಮಲ್ಲಿಕಾ ವಿ.ಶೆಟ್ಟಿ, ಜಯಂತಿ ಪೂಜಾರಿ, ವೆಂಕಪ್ಪ ಪೂಜಾರಿ, ನವಾಜ್ ಬಡಕಬೈಲು, ಸುರೇಶ ಜೋರ ಮತ್ತಿತರರು ಭೇಟಿ ನೀಡಿದರು.
ವಿಶೇಷತೆ:
ವಿಶಾಲವಾದ ವೇದಿಕೆ, ೧೪೨ ಮೀ.ಉದ್ದದ ಜೋಡು ಕರೆ, ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ, ಶಿಸ್ತುಬದ್ಧ ಸ್ವಯಂ ಸೇವಕರ ದಂಡು, ಬ್ಯಾಂಡು, ಕೊಂಬು, ವಾದ್ಯ, ಚೆಂಡೆ ವಾದನ ಸಹಿತ ಕೀಲು ಕುದುರೆ ಮತ್ತು ಶಿಲ್ಪಾ ಗೊಂಬೆ ಬಳಗದ ಕುಣಿತ ಗಮನ ಸೆಳೆಯಿತು.
