ಕೈಕಂಬ:ಕಟೀಲು ಶ್ರೀ ದುರ್ಗಾ ಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ಕಟೀಲು ಶ್ರೀ ದೇವಿ ಮಹಾತ್ಮೆ ಯಕ್ಷಗಾನವು ಕೈಕಂಬದಲ್ಲಿ ದಿ.ಮೋನಮ್ಮ ಪೂಜಾರ್ತಿ ಚಂದಪ್ಪ ಪೂಜಾರಿ ಸ್ಮರಣಾರ್ಥವಾಗಿ ಜರಗುವ ಸಂದರ್ಭದಲ್ಲಿ ದೇವರ ಚೌಕಿ ಮಂಟಪಕ್ಕೆ ಕೊಂಬು , ಬ್ಯಾಂಡ್ , ಚೆಂಡೆ ಕುಣಿತದೊಂದಿಗೆ ವಿಜ್ರಂಭಣೆಯಿಂದ ದಂಡಿ ಮೆರವಣಿಗೆಯಲ್ಲಿ ಶ್ರೀ ದೇವರ ಆಗಮನ.
ಕಟೀಲು ಶ್ರೀ ದುರ್ಗಾ ಪರಮೇಶ್ವರೀ ದೇವಿಗೆ ಶ್ರೀಮತಿ ಲೋಕೇಶ್ ಪೂಜಾರಿ ,ಸಹೋದರರು ಸಹೋದರಿಯರು ಕುಟೂಂಬ ಸಮೇತರಾಗಿ ದೇವಿಗೆ ಹೂವು, ಸೀರೆ ,ಫಲಪುಷ್ಪ ಒಪ್ಪಿಸಿ ದೇವಿಯನ್ನು ಸಂತ್ರಪ್ತಿಗೊಳಿಸಿದರು. ಚೌಕಿ ಮಂಟಪದಲ್ಲಿ ದೇವರಿಗೆ ಪೂಜೆ ನೆರವೇರಿತು.









