ಕೈಕಂಬ:ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರು “ದಿ. ಮೋನಮ್ಮ ಪೂಜಾರ್ತಿ ಮತ್ತು ಚಂದಪ್ಪ ಪೂಜಾರಿ” ಯವರ ಸ್ಮರಣಾರ್ಥವಾಗಿ ಜ.30 ರಂದು ಶನಿವಾರ ” ಶ್ರೀ ದೇವಿ ಮಹಾತ್ಮೆ “ ರಾತ್ರಿ 8.30 ಕ್ಕೆ ಯಕ್ಷಗಾನ ಬಯಲಾಟವು ನಡೆಯಲಿದೆ. 
ಕೈಕಂಬದ ಶ್ರೀಮತಿ ಲೋಕೇಶ್ ಪೂಜಾರಿ ಮತ್ತು ಸಹೋದರರು ಹಾಗೂ ಸಹೋದರಿಯರು ಗುರುಪುರ ಕೈಕಂಬದಲ್ಲಿ ನಡೆಯುವ ಯಕ್ಷಗಾನಕ್ಕೆ ಆತ್ಮೀಯವಾಗಿ ಸ್ವಾಗತಿಸಿದ್ದಾರೆ.
ಸಂಜೆ ಗಂಟೆ 6ಕ್ಕೆ ದಂಡಿ ಮೆರವಣಿಗೆಯಲ್ಲಿ ಚೌಕಿ ಮಂಟಪಕ್ಕೆ ದೇವರ ಆಗಮನ ಸಂಜೆ 6.30ರಿಂದಭಜನಾ ಕಾರ್ಯಕ್ರಮ, 8.30ಕ್ಕೆ ಚೌಕಿ ಪೂಜೆ ರಾತ್ರಿ ಗಂಟೆ 8.30ರಿಂದ ಅನ್ನಸಂತರ್ಪಣೆ ಜರಗಲಿದೆ.
