ಮಂಗಳೂರು:ಜಾಗತಿಕ ಬಂಟರ ಸಂಘಗಳ ಒಕ್ಕೂಟ ಸಮಾಜಕಲ್ಯಾಣ ಕಾರ್ಯಕ್ರಮದಡಿಯಲ್ಲಿ ಸಂಕಷ್ಟದಲ್ಲಿರುವ ಕರಾವಳಿ ಪ್ರಾಂತ್ಯದ ಸಂಕಷ್ಟದಲ್ಲಿರುವ ಯಕ್ಷಗಾನ ಕಲಾವಿದರಿಗೆ ನೆರವು ನೀಡುವ ಮಾನವೀಯ ಮೌಲ್ಯಗಳ ಕೆಲಸವನ್ನು ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅವರು ಮಾಡುತ್ತಿರುವುದು ಗಮನರ್ಹವಾಗಿದೆ. ವಿಚಾರವಾಗಿದೆ ಅನೇಕ ರ‍್ಷಗಳಿಂದ ಕಟೀಲು ಮೇಳದಲ್ಲಿ ಒಂದನೇ ಕಲಾವಿದರಾಗಿ ಸೇವೆ ಸಲ್ಲಿಸಿ ಅನಾರೋಗ್ಯ ನಿಮಿತ್ತ ಮನೆಯಲ್ಲಿಯೇ ಉಳಿದು ತನ್ನ ಕಲಾಸೇವೆಯನ್ನು ಮುಂದುವರಿಸುವುದಕ್ಕೆ ಅಸಾಧ್ಯವಾದ ಸಂರ‍್ಭದಲ್ಲಿ ಅವರ ನೆರವಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ಸಂಪಾಜೆ ಶೀನಪ್ಪ ರೈ ಯವರಿಗೆ ಅವರ ಮಗನ ಮೂಲಕ ಅನುದಾನದ ಚೆಕ್ ನೀಡಿದರು.
ಕರ್ನಾಟಕ ಯಕ್ಷಗಾನ ಮೇಳದಲ್ಲಿ ಕಲಾಸೇವೆಯನ್ನು ನಿರಂತರ ಮಾಡಿದ ದಿವಂಗತ ಗುಂಪೇ ರಾಮಯ್ಯ ರೈ ಅವರ ಪತ್ನಿ ಶ್ರೀಮತಿ ಶಶಿಕಲಾ ರೈ ಯವರಿಗೆ ಒಕ್ಕೂಟದಿಂದ ಚಿಕಿತ್ಸೆಗೆ ಧನಸಹಾಯ ನೀಡಲಾಯಿತು.
ಕಟೀಲು ಮೇಳದಲ್ಲಿ ೪೦ ವರ್ಷಗಳಿಂದ ಚೌಕಿ ಕಲಾವಿದರಾಗಿ ನಿರಂತರ ಸೇವೆಯನ್ನು ಸಲ್ಲಿಸಿದ ನಾಳ ರಘು ಶೆಟ್ಟಿ ಅವರಿಗೆ ಹೊಸ ಮನೆ ನಿರ್ಮಾಣಕ್ಕೆ ಅನುದಾನ ನೀಡಿ ಸಮಾಜದಲ್ಲಿ ಗೌರವ ತರುವ ಕೆಲಸವನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಾಡಿದೆ.
ಎಂದು ಹೇಳುವುದಕ್ಕೆ ಬಹಳ ಸಂತೋಷವಾಗುತ್ತದೆ ಇದೇ ರೀತಿಯ ಕಲಾ ಸೇವಕರಿಗೆ ಒಕ್ಕೂಟ ನೆರವು ನೀಡುತ್ತದೆ ಎಂಬ ಭರವಸೆಯೊಂದಿಗೆ ಕಲಾವಿದರ ಕುಟುಂಬ ಶೀಘ್ರ ಸುಸ್ಥಿತಿಗೆ ಬರಲೆಂದು ಭಗವಂತ ಅನುಗ್ರಹಿಸಲಿ ಎಂದು ಒಕ್ಕೂಟದ ಪದಾಧಿಕಾರಿಗಳು ಪ್ರಾರ್ಥಿಸಿದರು.
