ಬಂಟ್ವಾಳ:ಶ್ರೀ ಕ್ಷೇ. ಧ. ಗ್ರಾ. ಯೋಜನೆ ಬಿ.ಸಿ. ಟ್ರಸ್ಟ್ , ಬಂಟ್ವಾಳ ತಾಲೂಕು ವಗ್ಗ ವಲಯದ ಪಿಲಾತಬೆಟ್ಟು ಒಕ್ಕೂಟದ ತ್ರೈಮಾಸಿಕ ಸಭೆ ಮೂರ್ಜೆ ದ.ಕ.ಜಿ.ಪಂ. ಶಾಲೆಯಲ್ಲಿ ನಡೆಯಿತು. ಯೋಜನೆಯ ದ.ಕ. ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಅವರು ಗ್ರಾಮಾಭಿವೃದ್ಧಿ ಯೋಜನೆಯ ಫಲಾನುಭವಿ ಸದಸ್ಯರಿಗೆ ಯೋಜನೆಯಿಂದ ಆರ್ಥಿಕ ಸೌಲಭ್ಯವನ್ನು ಪಡೆದುಕೊಳ್ಳುವ ಬಗ್ಗೆ, ಅದರ ಸದುಪಯೋಗದ ಮಾಹಿತಿ ನೀಡಿದರು. ಗ್ರಾಮಾಭಿವೃದ್ಧಿ ಯೋಜನೆ ಕೇವಲ ಸಾಲ ನೀಡುವ ಸಂಸ್ಥೆಯಲ್ಲ. ಜನರು ಆರ್ಥಿಕವಾಗಿ ಅಭಿವೃದ್ಧಿ ಹೊಂದಿ ಸ್ವಾವಲಂಬಿ ಜೀವನ ನಡೆಸುವಲ್ಲಿ ಯೋಜನೆಯ ಮಹತ್ತರವಾದ ಕೊಡುಗೆ ನೀಡುತ್ತಿದೆ ಎಂದ ಅವರು, ಈಗಾಗಲೇ ಪಿಲಾತಬೆಟ್ಟು ಕಾರ್ಯಕ್ಷೇತ್ರದಲ್ಲಿ 15 ಅಶಕ್ತ ಕುಟುಂಬಗಳಿಗೆ 11 ಲಕ್ಷದ 70 ಸಾವಿರ ರೂ. ತಿಂಗಳ ಮಾಸಾಶನ ನೀಡಲಾಗಿದೆ ಎಂದು ಹೇಳಿದರು.IMG-20201014-WA0029

ಒಕ್ಕೂಟದ ಅಧ್ಯಕ್ಷೆ ಸುಮಿತ್ರಾ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ. ಅಭಿವೃದ್ಧಿ ಅ„ಕಾರಿ ರಾಜಶೇಖರ್ ರೈ ಅವರು ಭಾಗವಹಿಸಿ ಗ್ರಾ.ಪಂ. ನಲ್ಲಿ ದೊರಕುವ ಸರಕಾರಿ ಸೌಲಭ್ಯಗಳ ಬಗ್ಗೆ ಮತ್ತು ಶೌಚಾಲಯ ಗುಂಡಿಯ ಬಗ್ಗೆ ಮಾಹಿತಿ ನೀಡಿದರು. ಮೂರ್ಜೆ ನಿವಾಸಿ ಮತ್ತು ಮಮ್ತಾಜ್‍ಬಾನು ಮತ್ತು ಹುಸೈನ್ ಅವರ ಪುತ್ರಿ ಹರ್ಷಿದಾಬಾನು ಹುಟ್ಟು ಅಂಗವೈಕಲ್ಯದಿಂದ ಬಳಲುತ್ತಿದ್ದು, ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಜಲಮಂಗಳ ಕಾರ್ಯಕ್ರಮದಡಿಯಲ್ಲಿ ವೀಲ್‍ಚೆಯರ್‍ನ್ನು ಸತೀಶ್ ಶೆಟ್ಟಿ ಅವರು ವಿತರಿಸಿದರು.1510pkt1

ತಾಲೂಕು ಯೋಜನಾ„ಕಾರಿ ಜಯಾನಂದ ಪಿ., ವಲಯ ಮೇಲ್ವಿಚಾರಕಿ ಭವಾನಿ ಹಾಗೂ ಪಿಲಾತಬೆಟ್ಟು ಕಾರ್ಯಕ್ರೇತ್ರದ ಸೇವಾ ಪ್ರತಿನಿ„ ಅಮೃತಾ ಎಸ್., ಒಕ್ಕೂಟದ ಉಪಾಧ್ಯಕ್ಷ ಜನಾರ್ದನ ಬಂಗೇರ, ಕಾರ್ಯದರ್ಶಿ ಶೋಭಾ, ಜತೆ ಕಾರ್ಯದರ್ಶಿ ಮನೋಜ್ ಕುಮಾರ್, ಕೋಶಾ„ಕಾರಿ ಯೋಗೀಶ್‍ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *