ಬಂಟ್ವಾಳ:ಪಶುಸಂಗೋಪನಾ ಇಲಾಖಾ ವತಿಯುಂದ ಬಂಟ್ವಾಳ ತಾಲೂಕಿನ ಉಳಿಗ್ರಾಮದ ಕಕ್ಕೆಪದವಿನಲ್ಲಿ ಪ್ರಾಥಮಿಕ ಪಶುಚಿಕಿತ್ಸಾಕೇಂದ್ರದ ನೂತನ ಕಟ್ಟಡದ ಲೋಕಾರ್ಪಣೆಗೊಂಡಿತು.ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು ನೂತನ ಪಶುಚಿಕಿತ್ಸಾ ಕೇಂದ್ರವನ್ನು ಉದ್ಘಾಟಿಸಿ,ಈ ಭಾಗದ ರೈತರು,ಹೈನುಗಾರರಿಗೆ ಈ ಕೇಂದ್ರವು ಸದುಪಯೋಗವಾಗಲಿ ಎಂದು ಹಾರೈಸಿದರು.
ದ.ಕ.ಜಿ.ಪಂ.ಅಧ್ಯಕ್ಷೆ ಮೀನಾಕ್ಷಿಶಾಂತಿಗೋಡು,ಜಿಪಂಸದಸ್ಯರಾದ ಪದ್ಮಶೇಖರಜೈನ್,ರವೀಂದ್ರಕಂಬಳಿ, ತಾಪಂಸದಸ್ಯೆ ಬೇಬಿಕೃಷ್ಣಪ್ಪ,ಪಶುಸಂಗೋಪನಾ ಇಲಾಖೆಯ ಉಪನೊರ್ದೇಶಕ ಡಾ.ಪ್ರಸನ್ನಕುಮಾರ್,ಪ್ರಭಾರ ಸಹಾಯಕ ನಿರ್ದೇಶಕ ಡಾ.ಅವಿನಾಶ್ ಭಟ್,ರಾಯಿ ಪಶು ಕೇಂದ್ರದ ವೈದ್ಯಾಧಿಕಾರಿ ಡಾ.ಉಮೇಶ್ ಕಿರಣ್,ಡಾ.ಆಶೋಕ್ ಶೆಟ್ಟಿ,ಪಶುವೈದ್ಯಪರಿವೀಕ್ಷಕ ಬಾಲಕೃಷ್ಣ,ಸಿಬ್ಬಂದಿ ದಿವ್ಯಾ,ಉಳಿಗ್ರಾಪಂ ಪಿಡಿಒ ಶ್ರೀಧರ್,ಗ್ರಾಪಂ ನಿಕಟಪೂರ್ವ ಉಪಾಧ್ಯಕ್ಷ ಸುರೇಶ್ ಮೈರ,ವಗ್ಗ ಹಾ.ಉ.ಸ.ಸಂಘದ ಅಧ್ಯಕ್ಷ ಶಿವಪ್ಪಗೌಡ,ಅಭಿಯಂತರ ರಂಜಿತ್ ಮೊದಲಾದವರಿದ್ದರು.
