ಬಂಟ್ವಾಳ:ಇಲ್ಲಿನ ಪಾಣೆಮಂಗಳೂರು-ಮೆಲ್ಕಾರ್ ರಾಷ್ಟ್ರೀಯ ಹೆದ್ದಾರಿ ಬಳಿ ಬುಧವಾರ ಕಾಣಿಸಿಕೊಂಡ ಕೃತಕ ನೆರೆಯಿಂದ ಶ್ರೀಹರಿ ಅಲ್ಯೂಮೀನಿಯಂ ಸಾಮಾಗ್ರಿ ತಯಾರಿಕಾ ಘಟಕಕ್ಕೆ ನೀರು ನುಗ್ಗಿ ಅಪಾರ ನಷ್ಟ ಉಂಟಾಗಿದೆ.
ಇದರಿಂದಾಗಿ ಲಕ್ಷಾಂತರ ಮೌಲ್ಯದ ಯಂತ್ರೋಪಕರಣ ಮತ್ತು ವಿದ್ಯುತ್ ಸಾಮಾಗ್ರಿಗೆ ಕೆಸರು ನೀರು ನುಗ್ಗಿ ಹಾನಿಗೀಡಾಗಿದೆ. ಸ್ಥಳೀಯ ಕಟ್ಟಡ ಮಾಲೀಕರೊಬ್ಬರು ಹೆದ್ದಾರಿ ಬದಿ ತೋಡಿಗೆ ಅಕ್ರಮವಾಗಿ ಮಣ್ಣು ತುಂಬಿ ಸಕರ್ಾರಿ ಜಮೀನು ಅತಿಕ್ರಮಣಗೊಳಿಸಿದ ಪರಿಣಾಮ ಕೃತಕ ನೆರೆ ಉಂಟಾಗಿದೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಯಂತ್ರೋಪಕರಣ ಹಾನಿಗೀಡಾದ ಸಂಸ್ಥೆ ಮಾಲೀಕ ನವೀನ್ ಕೋಟ್ಯಾನ್ ಅವರು ನರಿಕೊಂಬು ಗ್ರಾಮ ಪಂಚಾಯಿತಿ ಸಹಿತ ಹೆದ್ದಾರಿ ಇಲಾಖೆ ಮತ್ತು ನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಹೆದ್ದಾರಿ ಇಲಾಖೆ ಎಂಜಿನಿಯರ್ ಮಾಯಾಂಕ್ ಮಿಶ್ರಾ ಮತ್ತಿತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ರಸ್ತೆ ಅತಿಕ್ರಮಣ ಬಗ್ಗೆ ಪರಿಶೀಲನೆ ನಡೆಸಿದ್ದು, ಬಳಿಕ ಹಿಟಾಚಿ ಮೂಲಕ ಮಣ್ಣು ತೆರವುಗೊಳಿಸಿಸಲಾಗಿದೆ ಎಂದು ತಿಳಿಸಿದ್ದಾರೆ.
