ಬಂಟ್ವಾಳ: ಇಲ್ಲಿನ ಸಜಿಪಮೂಡ ಕರ್ಣಾಟಕ ಬ್ಯಾಂಕ್ ಶಾಖೆಯಲ್ಲಿ ಬ್ಯಾಂಕಿನ ಮಾಜಿ ಅಧ್ಯಕ್ಷ ದಿವಂಗತ ಅನಂತಕೃಷ್ಣ ಇವರಿಗೆ ಹುಟ್ಟೂರ ಶ್ರದ್ಧಾಂಜಲಿ ಕಾರ್ಯಕ್ರಮ ಮಂಗಳವಾರ ನಡೆಯಿತು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ. ಸದಾನಂದ ಪೂಂಜಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನುಡಿನಮನ ಸಲ್ಲಿಸಿದರು. ಶಾಖೆಯ ಪ್ರಬಂಧಕ ಮಿಥಿಲೇಶ್ ಕುಮಾರ್, ಪ್ರಮುಖರಾದ ಸುಮನ್ ಕೆ.ಎ, ರಾಮಚಂದ್ರಯ್ಯ ,ರಾಘವೇಂದ್ರ ಕುಮಾರ್, ಪ್ರಣಮ್, ಪ್ರಶಾಂತ್ ಕುಮಾರ್, ಎಂ. ಸುಬ್ರಹ್ಮಣ್ಯ ಭಟ್, ಜಯಶಂಕರ ಬಾಸ್ರಿತ್ತಾಯ, ವೆಂಕಟೇಶ್ವರ ಭಟ್, ಬಿ.ದೇವಿಪ್ರಸಾದ್ ಪೂಂಜಾ, ಕೆ.ಸೀತಾರಾಮ ಶೆಟ್ಟಿ, ಪ್ರಾಂಶುಪಾಲ ಬಾಬು ಗಾಂವ್ಕರ್, ಹರೀಶ್ ಗಟ್ಟಿ , ವೆಂಕಟರಾಯ ಮಯ್ಯ, ಶ್ರೀನಾಥ್ ಶೆಟ್ಟಿ, ವಿಶ್ವನಾಥ್ ಬೆಳ್ಚಡ, ವಿಶ್ವನಾಥ್ ಕೊಟ್ಟಾರಿ, ರಾಮಚಂದ್ರ ಮಯ್ಯ ಮತ್ತಿತರರು ಇದ್ದರು.
